ಬೆಂಗಳೂರು: ‘ದೇಶ ಕಂಡ ಪ್ರಚಂಡ ನಾಯಕ ಅನಂತಕುಮಾರ್. ಅವರ ಸಂಘಟನಾ ಚತುರತೆ, ಹೋರಾಟದ ಗುಣಗಳು ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್.ಕೆ ಅಡ್ವಾಣಿ ಅವರನ್ನು ಪ್ರಭಾವಿಸಿದ್ದವು. ಪ್ರಧಾನಿ ಗಾದಿಗೆ ಏರುವ ಸಾಮರ್ಥ್ಯ,ಪ್ರತಿಭೆ ಹಾಗೂ ಚಾಣಾಕ್ಷತೆ ಅವರಿಗಿತ್ತು’ ಎಂದು ಲೇಖಕ ಬಾಬು ಕೃಷ್ಣಮೂರ್ತಿ ತಿಳಿಸಿದರು.
ಅನಂತಕುಮಾರ್ ಪ್ರತಿಷ್ಠಾನ ಸೋಮವಾರ ಆನ್‌ಲೈನ್‌ನಲ್ಲಿಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಅನಂತಪಥ’ ಮಾಸ ಪತ್ರಿಕೆಯ ನವೆಂಬರ್ ಸಂಚಿಕೆ ( 17ನೇ ಸಂಚಿಕೆ) ಬಿಡುಗಡೆ ಮಾಡಿ ಮಾತನಾಡಿದರು.
‘ಕೇಂದ್ರ ಸಚಿವರಾಗಿ ಅವರು ಸಮರ್ಥವಾಗಿ ಕೆಲಸ ಮಾಡಿದ್ದರು. ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರು. ಒತ್ತಡಗಳ ನಡುವೆಯೂ ಕವನಗಳನ್ನು ರಚಿಸುತ್ತಿದ್ದರು. ಪುಸ್ತಕಗಳನ್ನು ಓದುತ್ತಿದ್ದರು. ವಿನಮ್ರತೆಯ ಗುಣ ಮೈಗೂಡಿಸಿಕೊಂಡಿದ್ದ ಅವರು ಹಿರಿಯರನ್ನು ಗೌರವದಿಂದ ಕಾಣುತ್ತಿದ್ದರು’ ಎಂದು ಹೇಳಿದರು.
ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್,ಅನಂತಪಥ ಪತ್ರಿಕೆಯ ಸಂಪಾದಕ ಟಿ.ಎಸ್.ಗೋಪಾಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.