ADVERTISEMENT

ಬೆಂಗಳೂರಿನಲ್ಲಿ ಮತ್ತೊಂದು ಬಹುಮಹಡಿ ಕಟ್ಟಡ ಕುಸಿತ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 5:19 IST
Last Updated 28 ಸೆಪ್ಟೆಂಬರ್ 2021, 5:19 IST
ಬೆಂಗಳೂರಿನ ಲಕ್ಕಸಂದ್ರದಲ್ಲಿ ಸೋಮವಾರ ಕುಸಿದಿದ್ದ ಕಟ್ಟಡದ ಚಿತ್ರ
ಬೆಂಗಳೂರಿನ ಲಕ್ಕಸಂದ್ರದಲ್ಲಿ ಸೋಮವಾರ ಕುಸಿದಿದ್ದ ಕಟ್ಟಡದ ಚಿತ್ರ   

ಬೆಂಗಳೂರು: ನಗರದಲ್ಲಿ ಮತ್ತೊಂದು ಬಹುಮಹಡಿ ಕಟ್ಟಡ ಮಂಗಳವಾರ ಬೆಳಿಗ್ಗೆ ಕುಸಿದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಡೇರಿ ವೃತ್ತದಲ್ಲಿರುವ‌‌ ಕೆಎಂಎಫ್ ಆವರಣದಲ್ಲಿರುವ‌ ಮೂರು ಅಂತಸ್ತಿನ ಕಟ್ಟಡ ಕುಸಿದಿದೆ. ಈ ಕಟ್ಟಡ, ನೌಕರರ ಕ್ವಾರ್ಟರ್ಸ್ ಆಗಿತ್ತು.ಶಿಥಿಲವಾಗಿದ್ದರಿಂದ ಹಲವು ತಿಂಗಳ ಹಿಂದೆಯೇ ಎಲ್ಲರನ್ನೂ ಕಟ್ಟಡದಿಂದ ಖಾಲಿ‌ ಮಾಡಿಸಲಾಗಿತ್ತು. ಕಟ್ಟಡದಲ್ಲಿ ‌ಯಾರೂ‌
ವಾಸವಿರಲಿಲ್ಲ. ಮಂಗಳವಾರ ನಿಧಾನವಾಗಿ ವಾಲಿದ ಕಟ್ಟಡ, ಕುಸಿದು ಬಿದ್ದಿದೆ.

ಸ್ಥಳಕ್ಕೆ ‌ಪೊಲೀಸರು ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ಕೆಎಂಎಫ್ ಅಧಿಕಾರಿಗಳೂ ಸ್ಥಳದಲ್ಲಿದ್ದಾರೆ. ಕಟ್ಟಡದ ಅವಶೇಷಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಲಕ್ಕಸಂದ್ರದಲ್ಲಿ ಸೋಮವಾರವಷ್ಟೇ ಮೂರು ಅಂತಸ್ತಿನ ಕಟ್ಟಡ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.