ADVERTISEMENT

ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿ ಮತ್ತೊಂದು ಚಿರತೆ ಬೋನಿಗೆ

ದಾಬಸ್‌ ಪೇಟೆ: ಶಿವಗಂಗೆ ಬೆಟ್ಟದ ತಪ್ಪಲಲ್ಲಿ ಮುಂದುವರಿದ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 15:34 IST
Last Updated 26 ನವೆಂಬರ್ 2024, 15:34 IST
ಬೋನಿಗೆ ಬಿದ್ದ ಮತ್ತೊಂದು ಚಿರತೆ
ಬೋನಿಗೆ ಬಿದ್ದ ಮತ್ತೊಂದು ಚಿರತೆ   

ದಾಬಸ್ ಪೇಟೆ: ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿ ಮುದಿರೇಶ್ವರ ಸ್ವಾಮಿ ದೇವಾಲಯದ ಹತ್ತಿರ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಮತ್ತೊಂದು ಚಿರತೆ ಸಿಕ್ಕಿಬಿದ್ದಿದೆ.

ಸೋಮವಾರ ಇದೇ ಪ್ರದೇಶದಲ್ಲಿ ಒಂದು ಚಿರತೆ ಬೋನಿಗೆ ಬಿದ್ದಿತ್ತು. ಈಗ ಮತ್ತೊಂದು ಚಿರತೆ ಸೆರೆಯಾಗಿದ್ದು, ಈ ಭಾಗದಲ್ಲಿ ಇನ್ನಷ್ಟು ಚಿರತೆಗಳು ವಾಸಿಸುತ್ತಿರಬಹುದು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಅರಣ್ಯಾಧಿಕಾರಿಗಳು, ವೈದ್ಯರು ಭೇಟಿ ನೀಡಿದ್ದರು. ಚಿರತೆಯ ರಕ್ತದ ಮಾದರಿ, ಕೂದಲು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಸೆರೆಸಿಕ್ಕ ಚಿರತೆಯನ್ನು ಬನ್ನೇರುಘಟ್ಟ ಜೈವಿಕ ರಾಷ್ಟ್ರೀಯ ಉದ್ಯಾನಕ್ಕೆ ಒಯ್ಯಲಾಯಿತು.

ADVERTISEMENT

ಐದು ವರ್ಷದ ಈ ಹೆಣ್ಣು ಚಿರತೆ ಮುಂಜಾನೆ 3 ಗಂಟೆ ಆಸುಪಾಸಿನಲ್ಲಿ ಚಿರತೆ ಸಿಕ್ಕಿರುವ ಅಂದಾಜಿದೆ. ಶಿವಗಂಗೆ, ಕಂಬಾಳು ಗೊಲ್ಲರಹಟ್ಟಿ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮುಂದುವರಿದಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನ.18ರಂದು ಹುಲ್ಲುಕೊಯ್ಯಲು ಹೋಗಿದ್ದ ಕಂಬಾಳು ಗೊಲ್ಲರಹಟ್ಟಿಯ ಕರಿಯಮ್ಮ ಎಂಬವರನ್ನು ಚಿರತೆ ಕೊಂದು ಹಾಕಿತ್ತು. ರಡು ದಿನಗಳಲ್ಲಿ ಎರಡು ಚಿರತೆ ಸಿಕ್ಕಿಬಿದ್ದಿವೆ. ಇವುಗಳಲ್ಲಿ ಕರಿಯಮ್ಮ ಅವರ ಕೊಂದ ಚಿರತೆ ಇದೆಯೇ ಎಂಬುದು ಗೊತ್ತಾಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.