ADVERTISEMENT

ಅನುರಾಧಾ ದೇಸಾಯಿಗೆ ‘ಆದರ್ಶ ಜೈನ ಮಹಿಳಾರತ್ನ’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 16:26 IST
Last Updated 27 ಅಕ್ಟೋಬರ್ 2024, 16:26 IST
ಪಂಡಿತರತ್ನ ಎ.ಶಾಂತಿರಾಜಶಾಸ್ತ್ರಿ ಟ್ರಸ್ಟ್‌ನ 36ನೇ ವಾರ್ಷಿಕೋತ್ಸವದಲ್ಲಿ ‘ಇಸ್ರೋದ ಟೆಲಿಮೆಟ್ರಿ ಡೇಟಾ ಅಕ್ವಿಸಿಷನ್ ಸಿಸ್ಟಮ್’ ಮುಖ್ಯಸ್ಥೆ ಅನುರಾಧ ಬಿ.ದೇಸಾಯಿ ಅವರಿಗೆ ‘ಆದರ್ಶ ಜೈನ ಮಹಿಳಾ ರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು
ಪ್ರಜಾವಾಣಿ ಚಿತ್ರ
ಪಂಡಿತರತ್ನ ಎ.ಶಾಂತಿರಾಜಶಾಸ್ತ್ರಿ ಟ್ರಸ್ಟ್‌ನ 36ನೇ ವಾರ್ಷಿಕೋತ್ಸವದಲ್ಲಿ ‘ಇಸ್ರೋದ ಟೆಲಿಮೆಟ್ರಿ ಡೇಟಾ ಅಕ್ವಿಸಿಷನ್ ಸಿಸ್ಟಮ್’ ಮುಖ್ಯಸ್ಥೆ ಅನುರಾಧ ಬಿ.ದೇಸಾಯಿ ಅವರಿಗೆ ‘ಆದರ್ಶ ಜೈನ ಮಹಿಳಾ ರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು ಪ್ರಜಾವಾಣಿ ಚಿತ್ರ   

ಬೆಂಗಳೂರು: ಇಸ್ರೊ ಟೆಲಿಮೆಟ್ರಿ ಡೇಟಾ ಅಕ್ವಿಸಿಷನ್ ಸಿಸ್ಟಮ್ ಮುಖ್ಯಸ್ಥೆ ಅನುರಾಧಾ ಬಿ.ದೇಸಾಯಿ ಅವರಿಗೆ ಪಂಡಿತರತ್ನ ಎ.ಶಾಂತಿರಾಜಶಾಸ್ತ್ರಿ ಟ್ರಸ್ಟ್ ವತಿಯಿಂದ ‘ಆದರ್ಶ ಜೈನ ಮಹಿಳಾ ರತ್ನ’ ಪ್ರಶಸ್ತಿಯನ್ನು ಭಾನುವಾರ ಪ್ರದಾನ ಮಾಡಲಾಯಿತು.

ಟ್ರಸ್ಟ್‌ನ 36ನೇ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿ, ‘ಸತತ ಪರಿಶ್ರಮದಿಂದ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ’ ಎಂದು ತಿಳಿಸಿದರು.

‘ಕತ್ತಲಾಗುವ ಮೊದಲು ಊಟ ಮಾಡುವ ಜೈನರ ಆಹಾರ ಪದ್ಧತಿ ವೈಜ್ಞಾನಿಕವಾಗಿದೆ. ಅದೇ ರೀತಿ ಜೀವಿಸು ಮತ್ತು ಇತರರನ್ನು ಜೀವಿಸಲು ಬಿಡು ಎಂಬ ಜೈನ ಧರ್ಮದ ನಿಯಮ ಕೂಡ ಇಂದು ಎಲ್ಲರಿಗೂ ಅಗತ್ಯ’ ಎಂದು ಹೇಳಿದರು.

ADVERTISEMENT

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪದ್ಮರಾಜ ಎನ್.ದೇಸಾಯಿ ಮಾತನಾಡಿ, ‘ವಿವಿಧ ಕ್ಷೇತ್ರಗಳ ಸಾಧಕರನ್ನು ಮಕ್ಕಳು ಸ್ಫೂರ್ತಿಯಾಗಿ ಸ್ವೀಕರಿಸಬೇಕು. ಅದು ಮುಂದೆ ನಿಮಗೂ ಸಾಧನೆ ಮಾಡಲು ಪ್ರೇರಣೆಯಾಗುತ್ತದೆ’ ಎಂದು ಸಲಹೆ ನೀಡಿದರು.

ಹೊಂಬುಜ ಜೈನಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಟ್ರಸ್ಟ್ ಚೇರ್ಮನ್‌ ಎಸ್.ಜಿತೇಂದ್ರಕುಮಾರ್, ವ್ಯವಸ್ಥಾಪಕ ಧರ್ಮದರ್ಶಿ ನೇಮಚಂದ್ರ ಡಿ., ಧರ್ಮದರ್ಶಿಗಳಾದ ಡಿ.ವಿ. ಪ್ರವೀಣ್‌ ಕುಮಾರ್‌, ಜೆ. ಸುರೇಶ್‌ ಕುಮಾರ್‌, ಎಂ.ಜೆ. ಇಂದ್ರಕುಮಾರ್‌, ಪಿ.ವೈ. ರಾಜೇಂದ್ರ ಕುಮಾರ್‌, ಎ.ಸಿ. ವಿದ್ಯಾಧರ್‌, ಪದ್ಮರಾಜ ದಂಡಾವತಿ, ಮಹಾವೀರ ಜೈನ್‌ ಭಾಗವಹಿಸಿದ್ದರು.

ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.