ಬೆಂಗಳೂರು: ಓಲಾ, ಉಬರ್ ಆಟೊಗಳ ಪ್ರಯಾಣದ ದರವು ಸಾರಿಗೆ ಇಲಾಖೆ ನಿಗದಿಪಡಿಸಿದ ದರದಂತೆಯೇ ಇರಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹೈಕೋರ್ಟ್ ಸೂಚನೆಯಂತೆ ಸಾರಿಗೆ ಇಲಾಖೆ ದರ ನಿಗದಿ ಕುರಿತಂತೆ ನಾಗರಿಕರ ವೇದಿಕೆಯ ಸದಸ್ಯರೊಂದಿಗೆ ಮಂಗಳವಾರ ಸಭೆ ನಡೆಸಿದಾಗ, ಈ ಒತ್ತಾಯ ಕೇಳಿಬಂತು.
ಓಲಾ, ಉಬರ್ ಹಾಗೂ ರ‍್ಯಾಪಿಡ್ ಆ್ಯಪ್‌ಗಳು ಅತಿಹೆಚ್ಚಿನ ದರ ವಸೂಲಿ ಮಾಡುತ್ತಿರುವುದನ್ನು ನಾಗರಿಕರು ಖಂಡಿಸಿದರು. ಮಳೆ ಹಾಗೂ ಸಂಚಾರ ದಟ್ಟಣೆ ಸಂದರ್ಭದಲ್ಲಿ ಮೂರು ಪಟ್ಟು ಹೆಚ್ಚು ದರವನ್ನು ಆ್ಯಪ್‌ಗಳು ವಸೂಲಿ ಮಾಡುತ್ತಿವೆ ಎಂದು ದೂರಿದರು.
ಸಾರಿಗೆ ಇಲಾಖೆಯಿಂದಲೇ ಆ್ಯಪ್ ಸೇವೆ ಆರಂಭಿಸಬೇಕು ಎಂದು ಒತ್ತಾಯಿಸಿದಾಗ, ಇದಕ್ಕೆ ಇಲಾಖೆಯಲ್ಲಿ ಅವಕಾಶ ಇಲ್ಲ ಎಂದು ಅಧಿಕಾರಿಗಳು ತಿಳಿಸಿದರು.
ಆ್ಯಪ್ ಕಂಪನಿಗಳು ಹಾಗೂ ಆಟೊ ಚಾಲಕರ ಸಂಘಗಳೊಂದಿಗೆ ಸೋಮವಾರ ಸಾರಿಗೆ ಇಲಾಖೆ ಸಭೆ ನಡೆಸಿತ್ತು. ಇದೀಗ ನಾಗರಿಕರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಎಲ್ಲವನ್ನೂ ಒಗ್ಗೂಡಿಸಿ ಬುಧವಾರ ಹೈಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.