ADVERTISEMENT

ತಂತ್ರಾಂಶ ಅನ್ವೇಷಣೆಗೆ ಪ್ರೇರಣೆಯಾಯಿತು ದೃಷ್ಟಿದೋಷ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2019, 20:09 IST
Last Updated 16 ಫೆಬ್ರುವರಿ 2019, 20:09 IST
ವಿಶ್ವೇಶ ಮತ್ತು ರಿಷಬ್‌ ಸಹೋದರರು
ವಿಶ್ವೇಶ ಮತ್ತು ರಿಷಬ್‌ ಸಹೋದರರು   

ಬೆಂಗಳೂರು: ಯುವ ಸಹೋದರರಿಬ್ಬರು ಅಭಿವೃದ್ಧಿಪಡಿಸಿರುವ ದೃಷ್ಟಿದೋಷ ಪತ್ತೆ ಹಚ್ಚುವತಂತ್ರಾಂಶಕ್ಕೆ ರಾಷ್ಟ್ರೀಯಐಆರ್‌ಐಎಸ್ ಮೇಳದ ಗ್ರ್ಯಾಂಡ್‌ ಪ್ರಶಸ್ತಿ ಲಭಿಸಿದೆ.

ಇಂದಿರಾನಗರ ಪಬ್ಲಿಕ್‌ ಶಾಲೆಯ ರಿಷಬ್‌ ಕೃಷ್ಣ ಹಾಗೂ ವಿಶ್ವೇಶ ಕೃಷ್ಣ ಈ ತಂತ್ರಾಂಶ ಅಭಿವೃದ್ಧಿಪಡಿಸಿದಸಹೋದರರು. ಸದ್ಯ ಅವರು ಇಂಟೆಲ್‌ ಅಂತರರಾಷ್ಟ್ರೀಯ ವಿಜ್ಞಾನ ಮತ್ತು ಎಂಜಿನಿಯರಿಂಗ್‌ ಮೇಳದಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.

ಬಾಲಕರು ಅಭಿವೃದ್ಧಿಪಡಿಸಿರುವ ‘ಕನ್ನಾ’ತಂತ್ರಾಂಶ ಮಕ್ಕಳಲ್ಲಿಯ ದೃಷ್ಟಿದೋಷವನ್ನು ಪತ್ತೆ ಹಚ್ಚುತ್ತದೆ.ರಿಷಬ್‌ ಕೃಷ್ಣಬಾಲ್ಯದಲ್ಲಿ ದುರ್ಬಲ ದೃಷ್ಟಿ ದೋಷಕ್ಕೆ (ಅಂಬ್ಲಿಯೋಪಿಯಾ) ಒಳಗಾಗಿದ್ದ. ಆ ತೊಂದರೆಯೇ ಸಹೋದರರನ್ನು ತಂತ್ರಾಂಶ ಅಭಿವೃದ್ಧಿಪಡಿಸಲು ಪ್ರೇರೇಪಿಸಿತು.

ADVERTISEMENT

ರಿಷಬ್‌ ನಾಲ್ಕು ವರ್ಷದವನಿದ್ದಾಗ, ಸಹೋದರ ವಿಶ್ವೇಶ ಎರಡು ವರ್ಷದವನಾಗಿದ್ದ. ಆಟವಾಡಲು ಹೋದಾಗ ಎಸೆದ ಚೆಂಡನ್ನು ವಿಶ್ವೇಶ ಚೆನ್ನಾಗಿಯೇ ಹಿಡಿಯುತ್ತಿದ್ದ. ಆದರೆ ರಿಷಬ್‌, ತನ್ನ ಓರಗೆಯವರು, ಬೇಗ ಬೇಗ ಮೆಟ್ಟಿಲುಗಳನ್ನು ಇಳಿದರೆ ಆತ ಮಾತ್ರ ಒಂದೊಂದೇ ಮೆಟ್ಟಿಲುಗಳನ್ನು ನೋಡಿಕೊಂಡು ನಿಧಾನಕ್ಕೆ ಇಳಿಯುತ್ತಿದ್ದ.

ಹಲವು ನೇತ್ರ ತಜ್ಞರನ್ನು ಭೇಟಿ ಮಾಡಿದರೂ ಫಲ ನೀಡಲಿಲ್ಲ. ‘ಅವನು ದೂರದೃಷ್ಟಿಯ ಸಮಸ್ಯೆಯನ್ನು ಹೊಂದಿದ್ದಾನೆ. ವಯಸ್ಸಾದಂತೆ ಅದು ಸರಿ ಹೋಗುತ್ತದೆ ಎಂದು ವೈದ್ಯರು ತಿಳಿಸಿದರು. ಆದರೆ ಭಾವಚಿತ್ರಗಳಿಂದ ಅವನಿಗೆ ವಕ್ರದೃಷ್ಟಿ ಇರುವುದು ತಿಳಿಯಿತು. ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಅಸ್ವಸ್ಥತೆಗೆ ಒಳಗಾದ. ಬಳಿಕ ಬೆಂಗಳೂರು ಮೂಲದಮಕ್ಕಳ ನೇತ್ರ ತಜ್ಞರ ಬಳಿ ಕರೆದುಕೊಂಡು ಹೋದೆವು.ಅಂಬ್ಲಿಯೋಪಿಯಾಕ್ಕೆ ಒಳಗಾಗಿರುವುದನ್ನು ಅವರು ಪತ್ತೆ ಹಚ್ಚಿದರು’ ಎಂದು ಆತನ ತಾಯಿ ಗಾಯತ್ರಿ ನೆನಪಿಸಿಕೊಂಡರು.

‘ಅಂಬ್ಲಿಯೋಪಿಯಾ ಎಂದರೆ, ಒಂದು ಕಣ್ಣು ಮಾತ್ರ ಉತ್ತಮವಾಗಿ ಕಾರ್ಯನಿರ್ವಹಿಸುವ ಸ್ಥಿತಿ. ಒಂದು ಕಣ್ಣಿನ ನರ ದುರ್ಬಲವಾಗಿ ಇನ್ನೊಂದರ ಮೇಲೆ ಅವಲಂಬನೆಯಾಗುತ್ತದೆ. ಆಗ ಅದರಿಂದಬರುವ ಸಂಕೇತಗಳನ್ನು ಮೆದುಳು ನಿರ್ಲಕ್ಷಿಸಲು ಪ್ರಾರಂಭಿಸುತ್ತದೆ. ಕೆಲ ದಿನಗಳ ತರುವಾಯ ಅಂಧತೆಗೆ ಕಾರಣವಾಗುತ್ತದೆ. ಮುಂಚಿತವಾಗಿ ಪತ್ತೆ ಹಚ್ಚಿದರೆ ತಡೆಗಟ್ಟಬಹುದು’ ಎಂದು ಗಾಯತ್ರಿ ತಿಳಿಸಿದರು.

‘ಕನ್ನಾ ತಂತ್ರಾಂಶಆರಂಭಿಕ ದೃಷ್ಟಿದೋಷಪತ್ತೆ ಹಚ್ಚುವಿಕೆಯನ್ನು ಖಾತರಿಪಡಿಸುತ್ತದೆ. ಇದು ಅಂತರ್ಜಾಲದಲ್ಲಿ ಶೀಘ್ರದಲ್ಲಿಯೇ ಲಭ್ಯವಾಗಲಿದೆ. ಚಿಕ್ಕಗಾತ್ರದ ಚಿತ್ರವನ್ನು ಅಪ್‌ಲೋಡ್‌ ಮಾಡಬೇಕು. ಚಿತ್ರವನ್ನು ತಂತ್ರಾಂಶ ಅಧ್ಯಯನ ಮಾಡಲಿದೆ. ಆಗ ಅದು ಸಂಭವನೀಯ ಅಪಾಯಕಾರಿ ಅಂಶಗಳನ್ನು ಪತ್ತೆ ಹಚ್ಚುತ್ತದೆ. ಕೇವಲ ಒಂದು ಚಿತ್ರದಿಂದ ಮೊಬೈಲ್‌ನಲ್ಲಿಯೇ ದೃಷ್ಟಿದೋಷವನ್ನು ಪತ್ತೆ ಹಚ್ಚಬಹುದು’ ಎಂದು ಯುವಕರು ಹೇಳಿದರು.

ಸದ್ಯ ಶಂಕರ ಆಸ್ಪತ್ರೆಯ 600 ದೃಷ್ಟಿದೋಷ ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಯುವಕರು ನಿರತರಾಗಿದ್ದಾರೆ. ‘ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವಕಣ್ಣಿನ ಶಿಬಿರಗಳಿಗೆ ಅದನ್ನು ತೆಗೆದುಕೊಂಡು ಹೋಗಲು ಆಶಿಸುತ್ತೇವೆ. ಮಕ್ಕಳಿಗೆ ಎಂಟು ವರ್ಷ ಆಗುವ ಮುಂಚೆಯೇ ಪತ್ತೆ ಹಚ್ಚಬೇಕು. ಇಲ್ಲದಿದ್ದರೆ ಕುರುಡುತನಕ್ಕೆ ಕಾರಣವಾಗುತ್ತದೆ. ಸಾಂಪ್ರದಾಯಿಕ ಪದ್ಧತಿಗಳು ತುಂಬಾ ಸಮಯ ತೆಗೆದುಕೊಳ್ಳುತ್ತವೆ’ ಎಂದು ರಿಷಬ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.