ADVERTISEMENT

ಇಗ್ನೊ 2023ನೇ ಸಾಲಿನ ಪ್ರವೇಶಾತಿಗೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2023, 0:30 IST
Last Updated 18 ಆಗಸ್ಟ್ 2023, 0:30 IST

ಬೆಂಗಳೂರು: ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವು (ಇಗ್ನೊ) 2023ನೇ ಸಾಲಿನ ವಿವಿಧ ಸ್ನಾತಕೋತ್ತರ ಪದವಿ, ಪಿಜಿ ಡಿಪ್ಲೊಮಾ, ಡಿಪ್ಲೊಮಾ ಮತ್ತು ಪ್ರಮಾಣಪತ್ರ ಮಟ್ಟದ ಕಾರ್ಯಕ್ರಮಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಪರಿಶಿಷ್ಟ ಜಾತಿ, ಪಂಗಡ ಮತ್ತು ದೈಹಿಕ ಅಶಕ್ತ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಮತ್ತು ಶುಲ್ಕ ಮರುಪಾವತಿ ಸೌಲಭ್ಯ ಪಡೆಯಲು ಅವಕಾಶವಿದೆ ಎಂದು ಇಗ್ನೊ ಬೆಂಗಳೂರು ಪ್ರಾದೇಶಿಕ ಕೇಂದ್ರದ ಹಿರಿಯ ಪ್ರಾದೇಶಿಕ ನಿರ್ದೇಶಕಿ ಎಸ್. ರಾಧಾ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳು ಬಿ.ಕಾಂ, ಬಿ.ಎ, ಬಿ.ಎಸ್‌ಸಿ ಗೆ ಅರ್ಜಿ ಸಲ್ಲಿಸುವಾಗ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅಡಿಯಲ್ಲಿ ಶುಲ್ಕ ವಿನಾಯಿತಿ ಪಡೆಯಬಹುದು ಎಂದು ವಿವರಿಸಿದರು.

ADVERTISEMENT

ಡಿಜಿಟಲ್‌ ಮಾಧ್ಯಮ, ದೃಶ್ಯ ಮಾಧ್ಯಮ, ಅಭಿವೃದ್ಧಿ ಪತ್ರಿಕೋದ್ಯಮ, ಸೇವಾ ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ, ಭೌಗೋಳಿಕ, ಭೌತವಿಜ್ಞಾನ, ಅನ್ವಯಿಕ ಅಂಕಿ ಅಂಶಗಳು, ಜಿಯೊ ಇನ್‌ಫಾರ್ಮ್ಯಾಟಿಕ್ಸ್‌ ಎಂ.ಎಸ್‌ಸಿ ಸಹಿತ ವಿವಿಧ ಉಪಯುಕ್ತ ಮತ್ತು ಉದ್ಯಮಸ್ನೇಹಿ ಕೋರ್ಸ್‌ಗಳನ್ನು ಪ್ರಾರಂಭಿಸಲಾಗಿದೆ. ಇಗ್ನೊ ಅಧ್ಯಯನ ಕೇಂದ್ರಗಳನ್ನು ಕ್ರಿಸ್ತು ಜಯಂತಿ ಕಾಲೇಜು, ಮೌಂಟ್‌ ಫೋರ್ಟ್‌ ಕಾಲೇಜುಗಳಲ್ಲಿ ಆರಂಭಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರವೇಶಾತಿಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು https://ignouadmission.samarth.edu.in/ ಲಿಂಕ್‌ ಕ್ಲಿಕ್‌ ಮಾಡಬೇಕು. ವಿವರಗಳಿಗೆ www.ignou.ac.in/userfiles/common-prospectus-english.pdfನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಮಾಹಿತಿಗೆ 9449337272ಗೆ ವಾಟ್ಸ್‌ಆ್ಯಪ್‌ ಮಾಡಬಹುದು. 080 29607272ಗೆ ಕರೆ ಮಾಡಬಹುದು. admissionrc12@ignou.ac.inಗೆ ಮೇಲ್‌ ಮಾಡಿ ವಿವರ ಪಡೆಯಬಹುದು ಎಂದು ಸಹಾಯಕ  ಪ್ರಾದೇಶಿಕ ನಿರ್ದೇಶಕರಾದ ಎಂ. ಷಣ್ಮುಗಂ, ಹೇಮಮಾಲಿನಿ ಎಚ್‌.ಸಿ, ಕಸ್ತೂರಿ ಪೆಸೆಲ್ಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.