ಬೆಂಗಳೂರು: ಆರ್.ಎಲ್. ಜಾಲಪ್ಪ ಅಕಾಡೆಮಿಯು ಹಿಂದುಳಿದ ಸಮುದಾಯದ ಪ್ರವರ್ಗ 1 ಮತ್ತು ಪ್ರವರ್ಗ 2ಎ ಗೆ ಸೇರಿದ ಗ್ರಾಮೀಣ ಪದವೀಧರರಿಗೆ ಕೆಎಎಸ್, ಪಿಎಸ್‌ಐ, ಎಫ್‌ಡಿಎ, ಎಸ್‌ಡಿಎ ಪರೀಕ್ಷೆಗಳಿಗೆ ನಾಲ್ಕು ತಿಂಗಳ ಉಚಿತ ತರಬೇತಿಯನ್ನು ಜುಲೈ 5ರಂದು ಪ್ರಾರಂಭಿಸಲಿದೆ.
ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಸೋಲೂರಿನಲ್ಲಿ ತರಬೇತಿ ನಡೆಯಲಿದ್ದು, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಿದ್ಯಾರ್ಥಿನಿಲಯಗಳ ವ್ಯವಸ್ಥೆ ಇದೆ. ಆಸಕ್ತರು www.rljacademy.in ವೆಬ್‌ಸೈಟಿನಲ್ಲಿ ಜ.31ರ ಒಳಗೆ ಅರ್ಜಿ ಸಲ್ಲಿಸಬೇಕು. ಮಾಹಿತಿಗೆ 9731480759, 7337705513 ಸಂಪರ್ಕಿಸಬಹುದು ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.