ADVERTISEMENT

ಬೈಯಪ್ಪನಹಳ್ಳಿ: ಮೇಲ್ಸೇತುವೆಗೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2024, 16:26 IST
Last Updated 9 ಫೆಬ್ರುವರಿ 2024, 16:26 IST
   

ಬೆಂಗಳೂರು: ಬೈಯಪ್ಪನಹಳ್ಳಿಯಲ್ಲಿರುವ ಸರ್‌ ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್‌ಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ನಿರ್ಮಿಸಲು ಸರ್ಕಾರವು ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ.

ಟರ್ಮಿನಲ್‌ ಸುತ್ತಮುತ್ತ ವಾಹನ ದಟ್ಟಣೆಯನ್ನು ನಿಯಂತ್ರಿಸಲು, ಪ್ರಯಾಣಿಕರು ಸರಾಗವಾಗಿ ಸಂಚರಿಸಲು ಬಿಬಿಎಂಪಿ ವತಿಯಿಂದ ಮೇಲ್ಸೇತುವೆ ನಿರ್ಮಿಸಲು ಸರ್ಕಾರವು ₹263 ಕೋಟಿ ಅನುದಾನವನ್ನು ಒದಗಿಸಿತ್ತು. ಬಳಿಕ ಈ ಯೋಜನೆಯನ್ನು ಹೊಸ ವಿನ್ಯಾಸದ ಮಾದರಿಯಲ್ಲಿ (ಡಿಸೈನ್‌ ಬಿಲ್ಡ್‌ ಟ್ರಾನ್ಸ್‌ಫರ್‌ ಆ್ಯಂಡ್‌ ಲಂಪ್ಸಮ್‌– ಟರ್ನ್‌ಕೀ– ನೋ ವೇರಿಯೇಶನ್‌, ನೋ ಎಸ್ಕಲೇಶನ್‌ ಮಾದರಿ) ನಿರ್ಮಿಸಲು ವಿಸ್ತೃತ ಯೋಜನಾ ವರದಿ ತಯಾರಿಸಲಾಗಿದೆ. 

ಯೋಜನೆಗೆ ಕಮ್ಮನಹಳ್ಳಿ ಮುಖ್ಯರಸ್ತೆ, ಮಾರುತಿ ಸೇವಾನಗರ, ಬೈಯಪ್ಪನಹಳ್ಳಿ ಮುಖ್ಯರಸ್ತೆ, ಬಾಣಸವಾಡಿ ಮುಖ್ಯರಸ್ತೆಗಳಲ್ಲಿ ಭೂ ಸ್ವಾಧೀನ ಮಾಡಬೇಕು. ಅದಕ್ಕಾಗಿ 2023–24ನೇ ಸಾಲಿನಲ್ಲಿ ಸರ್ಕಾರ ಒದಗಿಸಿದ ₹263 ಕೋಟಿಯಲ್ಲದೇ 2024–25ನೇ ಸಾಲಿನಲ್ಲಿ ₹117 ಕೋಟಿ ಒದಗಿಸಲು ಅನುಮೋದನೆ ನೀಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.