ADVERTISEMENT

ಬೆದರಿಸಿ ಹಣ ಸುಲಿಗೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 18:31 IST
Last Updated 22 ಜುಲೈ 2024, 18:31 IST
   

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಯುವತಿಯನ್ನು ಬೆದರಿಸಿ ₹1.50 ಲಕ್ಷ ಸುಲಿಗೆ ಮಾಡಿದ್ದ ಆರೋಪಿಯನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಹೇಂದ್ರ ಕುಮಾರ್‌ ಅಲಿಯಾಸ್‌ ಕಾರ್ತಿಕ್‌ (33) ಬಂಧಿತ.

‘ಮಸಾಜ್‌ ಪಾರ್ಲರ್‌ಗಳಲ್ಲಿ ಮಹಿಳಾ ಥೆರಪಿಸ್ಟ್‌ಗಳಿಂದ ಸೇವೆ ಪಡೆಯಲು ಕಾಯ್ದಿರಿಸುತ್ತಿದ್ದ ಆರೋಪಿ, ನಂತರ ಅವರನ್ನು ಸುಲಿಗೆ ಮಾಡುತ್ತಿದ್ದ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಜುಲೈ 3ರಂದು ಸುರೇಶ್‌ ಎಂಬ ಹೆಸರಿನಲ್ಲಿ ಮಸಾಜ್‌ಗೆ ಸಮಯ ನಿಗದ ಮಾಡಿಕೊಂಡಿದ್ದ ಆರೋಪಿ, ನಟ ಎಂದು ಹೇಳಿಕೊಂಡಿದ್ದ. ರಾಮಮೂರ್ತಿ ನಗರದ ಅಪಾರ್ಟ್‌ಮೆಂಟ್‌ವೊಂದರ ವಿಳಾಸ ನೀಡಿದ್ದ. 25 ವರ್ಷದ ಮಹಿಳಾ ಥೆರಪಿಸ್ಟ್‌ ಒಬ್ಬರಿಂದ ಮಸಾಜ್‌ಗಾಗಿ ಮುಂಗಡ ಕಾಯ್ದಿರಿಸಿದ್ದ. ಆರೋಪಿಯ ಸಂಚು ತಿಳಿಯದ ಮಹಿಳಾ ಥೆರಪಿಸ್ಟ್‌ ರಾತ್ರಿ 10.30ರ ಸುಮಾರಿಗೆ ಆತ ನೆಲೆಸಿದ್ದ ವಿಳಾಸಕ್ಕೆ ಬಂದಿದ್ದರು. ಬಳಿಕ ಆಕೆಯನ್ನು ತನ್ನ ಕಾರಿನಲ್ಲಿ ಕರೆದೊಯ್ದು ಕಾರಿನಲ್ಲಿ ಸುತ್ತಾಟ ನಡೆಸಿದ್ದ. ನೀವು ಅನೈತಿಕ ಚಟುವಟಿಕೆ ನಡೆಸುತ್ತಿದ್ದೀರಿ ಎಂದು ಸುಳ್ಳು ಪ್ರಕರಣ ದಾಖಲಿಸುತ್ತೇನೆ’ ಎಂದು ಬೆದರಿಸಿದ್ದ. ಅಲ್ಲದೇ ₹ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

‘ಹೆದರಿದ ಯುವತಿ ಆರೋಪಿ ಹೇಳಿದ್ದ ಖಾತೆಗೆ ₹1.50 ಲಕ್ಷ ವರ್ಗಾಯಿಸಿದ್ದರು. ನಂತರ ಯುವತಿಯನ್ನು ದೇವನಹಳ್ಳಿಯ ವಿಮಾನ ನಿಲ್ದಾಣದ ಬಳಿ ಕಾರಿನಿಂದ ಇಳಿಸಿ ತೆರಳಿದ್ದ’ ಎಂದು ಪೊಲೀಸರು ಹೇಳಿದರು.

ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ಹೆಸರು ಸುರೇಶ್‌ ಅಲ್ಲ ಮಹೇಂದ್ರ ಕುಮಾರ್‌ ಎಂಬುದು ತನಿಖೆ ವೇಳೆ ಬಯಲಾಗಿದೆ. ಮೋಜಿನ ಜೀವನಕ್ಕೆ ಹಣ ಹೊಂದಿಸಲು ಇದೇ ರೀತಿ ವಂಚಿಸಿದ್ದ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.