ADVERTISEMENT

ವಿಡಿಯೊ: BMTC ಬಸ್‌ನಲ್ಲಿ ಚಾಕು ಹಿಡಿದು ಆಟಾಟೋಪ ಪ್ರದರ್ಶಿಸಿದ ಜಾರ್ಖಂಡ್ ಯುವಕ!

ಬಿಎಂಟಿಸಿ ಬಸ್ ಕಂಡಕ್ಟರ್ ಒಬ್ಬರಿಗೆ ಯುವಕನೊಬ್ಬ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ವೈಟ್‌ಫಿಲ್ಡ್‌ನಲ್ಲಿ ಮಂಗಳವಾರ ನಡೆದಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಅಕ್ಟೋಬರ್ 2024, 5:59 IST
Last Updated 2 ಅಕ್ಟೋಬರ್ 2024, 5:59 IST
   

ಬೆಂಗಳೂರು: ಬಿಎಂಟಿಸಿ ಬಸ್ ಕಂಡಕ್ಟರ್ ಒಬ್ಬರಿಗೆ ಯುವಕನೊಬ್ಬ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ವೈಟ್‌ಫಿಲ್ಡ್‌ನಲ್ಲಿ ಮಂಗಳವಾರ ನಡೆದಿದೆ.

ಸದ್ಯ ಕಂಡಕ್ಟರ್ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ವೈಟ್‌ಫಿಲ್ಡ್‌ ಘಟಕದ ಬಿಎಂಟಿಸಿ ವೋಲ್ವೊ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹರ್ಷ ಸಿನ್ಹ್ ಎಂಬ ಜಾರ್ಖಂಡ್ ಮೂಲದ ವ್ಯಕ್ತಿ ಕ್ಷುಲ್ಲಕ ಕಾರಣಕ್ಕೆ ಕಂಡಕ್ಟರ್‌ಗೆ ಇರಿದಿದ್ದಾನೆ. ನಂತರ ಅಲ್ಲಿಯೇ ನಿಂತು ಚಾಕು ಪ್ರದರ್ಶಿಸಿದ್ದಾನೆ. ಬಯಭೀತರಾದ ಸಹ ಪ್ರಯಾಣಿಕರು ಬಸ್ಸಿನಿಂದ ಇಳಿದು ಹೋಗಿದ್ದಾರೆ.

ADVERTISEMENT

ಯುವಕ ಚಾಕು ಹಿಡಿದು ಬಸ್ಸಿನಲ್ಲಿ ನಿಂತಿದ್ದ ಪೋಟೊ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಅನೇಕರು ಯುವಕನ ಕೃತ್ಯ ಖಂಡಿಸಿದ್ದಾರೆ.

ಬಿಗ್ ಬಾಸ್ ಮಾಜಿ ಸ್ಪರ್ಧಿ ರೂಪೇಶ್ ರಾಜಣ್ಣ ಈ ವಿಡಿಯೊ ಹಂಚಿಕೊಂಡು ಬಿಎಂಟಿಸಿ ಅವರು ಇನ್ನೂ ಏಕೆ ದೂರು ದಾಖಲಿಸಿಲ್ಲ ಎಂದು ಕಿಡಿಕಾರಿದ್ದಾರೆ. ಅನೇಕ ಉತ್ತರ ಭಾರತೀಯರು ಬೆಂಗಳೂರಿಗೆ ವಲಸೆ ಬಂದು ಇಂತಹ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕೆಲ ವರದಿಗಳ ಪ್ರಕಾರ ಇತ್ತೀಚೆಗೆ ಕೆಲಸ ಕಳೆದುಕೊಂಡಿದ್ದ ಯುವಕ ಮಾನಸಿಕ ವರ್ತನೆ ಮೇಲೆ ನಿಗಾ ಕಳೆದುಕೊಂಡು ಹೀಗೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.