ಬೆಂಗಳೂರು: ಮಲ್ಲೇಶ್ವರದ ರಾಜಾಶಂಕರ್ ಆಟದ ಮೈದಾನದಲ್ಲಿ ಗೇಟ್ ಅಳವಡಿಕೆ ಕಾಮಗಾರಿಯಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸದ ಆರೋಪದಡಿ ಸಹಾಯಕ ಎಂಜಿನಿಯರ್ ಟಿ. ಶ್ರೀನಿವಾಸರಾಜು ಅವರನ್ನು ಅಮಾನತುಗೊಳಿಸಲಾಗಿದೆ.
ಕಾಮಗಾರಿ ಸಂದರ್ಭದಲ್ಲಿ, ಪಶ್ಚಿಮ ವಲಯದ ಯೋಜನೆ ವಿಭಾಗದಲ್ಲಿ ಕಾರ್ಯಪಾಲಕ ಎಂಜಿನಿಯರ್ ಕಚೇರಿಯಲ್ಲಿದ್ದ ಟಿ. ಶ್ರೀನಿವಾಸ್ ಅವರು ಪ್ರಸ್ತುತ, ರಾಜಾಜಿನಗರ ಉಪ ವಿಭಾಗದಲ್ಲಿ (ವಾರ್ಡ್ 101) ಸಹಾಯಕ ಎಂಜಿನಿಯರ್ ಆಗಿದ್ದಾರೆ.
ಪಶ್ಚಿಮ ವಲಯದ ಯೋಜನೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಎಲ್. ವೆಂಕಟೇಶ್ ಅವರಿಗೂ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.
2020–21ನೇ ಸಾಲಿನ ಉಪ
ಮೇಯರ್ ವಿವೇಚನೆಗೆ ಒಳಪಟ್ಟ ಅನುದಾನದ ₹51 ಲಕ್ಷದಲ್ಲಿ, ಪಶ್ಚಿಮ
ವಲಯದ ಯೋಜನೆ ವಿಭಾಗದಿಂದ ಗೇಟ್ ಅಳವಡಿಕೆ ಸೇರಿ ಕೆಲವು ಕಾಮಗಾರಿ
ಗಳನ್ನು ನಡೆಸಲಾಗಿತ್ತು. ಇದನ್ನು ಬೆನಕ ಡೆವಲಪರ್ಸ್ ಆ್ಯಂಡ್ ಪ್ರಾಜೆಕ್ಟ್‌ನ ಗುತ್ತಿಗೆದಾರರ ನರಹರಿ ನಿರ್ವಹಿಸಿದ್ದರು.
‘ಗೇಟ್‌ಗೆ ಸಮರ್ಪಕ ಕೀಲುಗಳನ್ನು ಅಳವಡಿಸಿಲ್ಲ. ಕೀಲುಗಳಿಗೆ ‘ಲ್ಯೂಬ್ರಿಕೆಂಟ್’ ಹಾಕಿಲ್ಲ. ಹೀಗಾಗಿ ಕೀಲುಗಳು ತುಕ್ಕು ಹಿಡಿದು ವೆಲ್ಡಿಂಗ್ ಮುರಿದು, ಗೇಟ್ ಬಿದ್ದು ಬಾಲಕ ಮೃತ ಪಟ್ಟಿದ್ದಾನೆ. ಇದು ಕರ್ತವ್ಯಲೋಪ ಎಂದು ಬಿಬಿಎಂಪಿ ಆಡಳಿತದ ಉಪ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.