ಯಲಹಂಕ: ಹೆಬ್ಬಾಳದ ಏಟ್ರಿಯಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ 2022–24ನೇ ಬ್ಯಾಚ್‌ನಲ್ಲಿ ವಿವಿಧ ವಿಷಯಗಳಲ್ಲಿ ಪದವಿಗಳನ್ನು ಪೂರ್ಣಗೊಳಿಸಿದ 627 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಇದೇ ವೇಳೆ, ನಾಲ್ಕು ಚಿನ್ನದ ಪದಕಗಳನ್ನು ಪಡೆಯುವ ಮೂಲಕ ವಿಟಿಯು ಪ್ರಥಮ ರ‍್ಯಾಂಕ್ ಪಡೆದ ಮಾಹಿತಿ ವಿಜ್ಞಾನ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಕೃತಿಕ ಸೆಂಥಿಲ್ ಮತ್ತು 10ನೇ ರ‍್ಯಾಂಕ್ ಪಡೆದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ವರುಣ್ ರಾಜ್.ಪಿ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಅಲ್ಥೆಮ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸಾದ್ ರೋಡಗಿ, ‘ಭಾರತವು ಆರ್ಥಿಕತೆಯಲ್ಲಿ ದಾಪುಗಾಲು ಹಾಕುತ್ತಿರುವ ಸಂದರ್ಭದಲ್ಲಿ ಪದವೀಧರರು ಸಮಸ್ಯೆ ಪರಿಹರಿಸುವ ಕೌಶಲಗಳೊಂದಿಗೆ ಉದ್ಯೋಗ ಪಡೆಯಲು ಮುಂದಾಗಬೇಕು. ಮಾತ್ರವಲ್ಲ, ನಿರಂತರ ಕಲಿಕೆಯ ಗುಣಗಳನ್ನು ಅಳವಡಿಸಿಕೊಂಡು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಸಿದ್ದರಾಗಬೇಕು’ ಎಂದು ತಿಳಿಸಿದರು.
ಏಟ್ರಿಯಾ ಸಮೂಹ ಸಂಸ್ಥೆಯ ಅಧ್ಯಕ್ಷ ಸಿ.ಎಸ್.ಸುಂದರ್‌ರಾಜು ಮಾತನಾಡಿದರು. ಫಿಡೆಲಿಟಿ ಇನ್ವೆಸ್ಟ್‌ಮೆಂಟ್‌ನ ನಿರ್ದೇಶಕ ಶಿಶಿರ್ ನಾಗೇಂದ್ರಪ್ಪ, ಏಟ್ರಿಯಾ ಸಮೂಹ ಸಂಸ್ಥೆಯ ಟ್ರಸ್ಟಿ ಕೆ.ನಾಗರಾಜು, ಪ್ರಾಂಶುಪಾಲ ಡಾ.ರಾಜೇಶ.ಎಸ್, ಉಪಪ್ರಾಂಶುಪಾಲರಾದ ನಳಿನಾಕ್ಷಿ ಎನ್. ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.