ADVERTISEMENT

ಹೆಚ್ಚು ಬಾಡಿಗೆ ನೀಡಲು ನಿರಾಕರಣೆ:ಅವಾಚ್ಯ ಶಬ್ಧಗಳಿಂದ ಯುವತಿಯನ್ನು ನಿಂದಿಸಿದ ಚಾಲಕ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 15:50 IST
Last Updated 2 ಅಕ್ಟೋಬರ್ 2024, 15:50 IST
<div class="paragraphs"><p>ಆಟೊಗಳು</p></div>

ಆಟೊಗಳು

   

ಬೆಂಗಳೂರು: ನಿಗದಿತ ದರಕ್ಕಿಂತ ಹೆಚ್ಚು ಬಾಡಿಗೆ ನೀಡಲು ನಿರಾಕರಿಸಿದ ಯುವತಿಗೆ ಆಟೊ ಚಾಲಕರೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಸಿಲ್ಕ್ ಬೋರ್ಡ್‌ಗೆ ತೆರಳಬೇಕಿದ್ದ ಯುವತಿ ಆಟೊ ಚಾಲಕನ ಬಳಿ, ‘ಬಾಡಿಗೆ ಎಷ್ಟು’ ಎಂದು ಕೇಳಿದ್ದಾರೆ. ಈ ವೇಳೆ ಚಾಲಕ ಹೆಚ್ಚು ಬಾಡಿಗೆ ಹೇಳಿದ್ದಾರೆ. ಆದರೆ, ₹ 150 ಕೊಡುವುದಾಗಿ ಯುವತಿ ಹೇಳಿದ್ದಾರೆ. ಸಿಟ್ಟಿಗೆದ್ದ ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ADVERTISEMENT

ಚಾಲಕನ ದುರ್ವರ್ತನೆಯ ವಿಡಿಯೊವನ್ನು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಯುವತಿ ಪೋಸ್ಟ್‌ ಮಾಡಿದ್ದಾರೆ. ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಘಟನೆ ನಡೆದ ಸ್ಥಳ, ದಿನಾಂಕ ಸೇರಿದಂತೆ ಸೂಕ್ತ ವಿವರ ನೀಡುವಂತೆ ಪೊಲೀಸರು ಯುವತಿಗೆ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.