ಬೆಂಗಳೂರು: ಯಕ್ಷಗಾನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ‘ಸಾರ್ಥಕ ಸಾಧಕ’ ಪ್ರಶಸ್ತಿಗೆ ಭಾಗವತ ಉಮೇಶ್ ಭಟ್ ಬಾಡ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಯಕ್ಷಸಿಂಚನ ಟ್ರಸ್ಟ್ ತಿಳಿಸಿದೆ.
ನಗರದ ಉದಯಭಾನು ಕಲಾಸಂಘದಲ್ಲಿ ಇದೇ 17ರಂದು ನಡೆಯಲಿರುವ ಟ್ರಸ್ಟ್ನ 15ನೇ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಉಮೇಶ್ ಭಟ್ ಅವರು ನಲವತ್ತು ವರ್ಷಗಳಿಂದ ಭಾಗವತಿಕೆ ನಡೆಸಿಕೊಡುತ್ತಿದ್ದಾರೆ. ಪ್ರಸಿದ್ಧ ಕಲಾವಿದರಾದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಲವಳ್ಳಿ ವೆಂಕಟೇಶ್ ರಾವ್ ಮತ್ತು ಕುಮಟಾ ಗೋವಿಂದ ನಾಯ್ಕ್ ಅವರು ಕಟ್ಟಿದ ಮೇಳದಲ್ಲಿ ಭಾಗವತರಾಗಿ ಕೆಲಸ ಮಾಡಿದ್ದಾರೆ ಎಂದು ಟ್ರಸ್ಟ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.