ADVERTISEMENT

ಮಹಾಬಲ ಶೆಟ್ಟಿ, ಶ್ರದ್ಧಾಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 21:50 IST
Last Updated 15 ಅಕ್ಟೋಬರ್ 2024, 21:50 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಬೆಂಗಳೂರು: ಷಡ್ಜ ಕಲಾ ಕೇಂದ್ರ ಟ್ರಸ್ಟ್ ನೀಡುವ ‘ಕೀರ್ತನ ಸೇವಾ ರತ್ನ ಪುರಸ್ಕಾರ’ಕ್ಕೆ ಕೀರ್ತನಕಾರ  ಕೆ.ಮಹಾಬಲ ಶೆಟ್ಟಿ ಹಾಗೂ ‘ಶ್ರೀ ಲಕ್ಷ್ಮಣದಾಸ ವೇಲಣಕರ್ ಮೆಮೋರಿಯಲ್ ಯುವ ಪುರಸ್ಕಾರ’ಕ್ಕೆ ಹರಿಕಥಾ ಕಲಾವಿದೆ ಶ್ರದ್ಧಾ ಗುರುದಾಸ್ ಆಯ್ಕೆಯಾಗಿದ್ದಾರೆ.

ಹರಿಕಥಾ ಕ್ಷೇತ್ರಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದವರಿಗೆ ಹಾಗೂ ಪ್ರತಿಭಾವಂತ ಯುವ ಕೀರ್ತನಕಾರರಿಗೆ ಈ ಪುರಸ್ಕಾರ ನೀಡಲಾಗುತ್ತಿದೆ. ಮಂಗಳೂರಿನ ಮಹಾಬಲ ಶೆಟ್ಟಿ ಅವರು ವೃತ್ತಿಯಲ್ಲಿ ವಕೀಲರಾಗಿದ್ದು, 50 ವರ್ಷಗಳಿಂದ ಹರಿಕಥಾ ಕಲೆಗೆ ಕೊಡುಗೆ ನೀಡುತ್ತಿದ್ದಾರೆ. ಶ್ರದ್ಧಾ ಗುರುದಾಸ್ ಅವರು ರಾಜ್ಯದ ವಿವಿಧೆಡೆ ಪ್ರದರ್ಶನ ನೀಡಿದ್ದಾರೆ. 

ADVERTISEMENT

ಕಥಾಕೀರ್ತನ ಕಲೆಯ ಏಳ್ಗೆಗೆ ದುಡಿದ ಮಹಾಚೇತನ ಅಚ್ಯುತದಾಸರು. ಅವರ ಹಾಗೂ ಅವರ ಶಿಷ್ಯರೂ ಆಗಿರುವ ಹರಿಕಥಾ ವಿದ್ವಾಂಸ ಕೀರ್ತನಾಚಾರ್ಯ ಲಕ್ಷ್ಮಣದಾಸ ವೇಲಣಕರ್ ಸಂಸ್ಮರಣೆಯಲ್ಲಿ ಇದೇ 20ರಂದು ಸಂಜೆ 4.30ಕ್ಕೆ ಭಾರತೀಯ ವಿದ್ಯಾಭವನದಲ್ಲಿ ‘ಕಥಾ ಕೀರ್ತನ ವೈಭವ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೇ ವೇಳೆ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.