ಯಲಹಂಕ: ವಿದ್ಯಾರಣ್ಯಪುರ ಬಡಾವಣೆಯಲ್ಲಿ ಗೋಲ್ಡ್ ಟ್ರೀ ಆಸ್ಟ್ರೋ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಪದವಿ ಪ್ರದಾನ ಹಾಗೂ ಸುವರ್ಣ ಸಂಭ್ರಮ ರಾಜ್ಯೋತ್ಸವ ಸಮಾರಂಭದಲ್ಲಿ 80ಕ್ಕೂ ಹೆಚ್ಚುಮಂದಿಗೆ ‘ಜ್ಯೋತಿಷ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಗೋಲ್ಡ್ ಟ್ರೀ ಆಸ್ಟ್ರೋ ಇಂಡಿಯಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪಂಡಿತ್ ದಿನೇಶ್.ಎನ್ ಮಾತನಾಡಿ, ‘ವೈಜ್ಞಾನಿಕ ಜ್ಯೋತಿಷಶಾಸ್ತ್ರ ಪ್ರಸಾರ ಹಾಗೂ ಶ್ರೀಸಾಮಾನ್ಯರಿಗೂ ಜ್ಯೋತಿಷಶಾಸ್ತ್ರ ಪರಿಚಯಿಸುವ ಉದ್ದೇಶದಿಂದ ನಕ್ಷತ್ರನಾಡಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊ ಳ್ಳಲಾಗಿದೆ. ಜ್ಯೋತಿಷ ಶಾಸ್ತ್ರದ ಕುರಿತು ಜನರಲ್ಲಿ ಆಳವಾಗಿ ಬೇರೂರಿರುವ ಮೂಢನಂಬಿಕೆ ಗಳನ್ನು ದೂರವಾಗಿಸಿ, ಶುದ್ಧ ವೈಜ್ಞಾನಿಕ ತಳಹದಿಯ ಜ್ಯೋತಿಷ ಶಾಸ್ತ್ರ ಪರಿಚಯಿಸುವ ಸಂಕಲ್ಪ ಹೊಂದಲಾಗಿದೆ’ ಎಂದು ತಿಳಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸ ಲಾಯಿತು. ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಗಮನ ಸೆಳೆದವು. ಚಲನಚಿತ್ರ ಕಲಾವಿದೆ ನಾಗಿಣಿ ಭರಣ, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಸದಸ್ಯ ಜಗದೀಶ ಹಿರೇಮನಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.