ADVERTISEMENT

ಬೆಂಗಳೂರಿನಲ್ಲಿ ಶ್ರದ್ಧಾ, ಭಕ್ತಿಯ ಬಕ್ರೀದ್‌

ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಿದ್ದರಾಮಯ್ಯ ಭಾಗಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 1:18 IST
Last Updated 11 ಜುಲೈ 2022, 1:18 IST
ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಭಾನುವಾರ ಬಕ್ರೀದ್‌ ಹಬ್ಬದ ವೇಳೆ ಬಾಲಕಿ ಪ್ರಾರ್ಥನೆ ಸಲ್ಲಿಸಿದ ದೃಶ್ಯ. – ಪ್ರಜಾವಾಣಿ ಚಿತ್ರ/ ಪಿ. ರಂಜು
ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಭಾನುವಾರ ಬಕ್ರೀದ್‌ ಹಬ್ಬದ ವೇಳೆ ಬಾಲಕಿ ಪ್ರಾರ್ಥನೆ ಸಲ್ಲಿಸಿದ ದೃಶ್ಯ. – ಪ್ರಜಾವಾಣಿ ಚಿತ್ರ/ ಪಿ. ರಂಜು   

ಬೆಂಗಳೂರು: ತ್ಯಾಗ ಹಾಗೂ ಬಲಿದಾನದ ಸಂಕೇತವಾದ ಬಕ್ರೀದ್‌ ಹಬ್ಬವನ್ನು ಮುಸ್ಲಿಮರು ನಗರದಲ್ಲಿ ಭಾನುವಾರ ಶ್ರದ್ಧೆ ಹಾಗೂ ಭಕ್ತಿಯಿಂದ ಆಚರಿಸಿದರು.

ಮೋಡ ಕವಿದ ವಾತಾವರಣ, ತುಂತುರು ಮಳೆಯ ನಡುವೆ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಕಳೆದ ಎರಡು ವರ್ಷಗಳಿಂದ ಕೋವಿಡ್‌ ಕಾರಣಕ್ಕೆ ಹಲವು ನಿರ್ಬಂಧಗಳನ್ನು ವಿಧಿಸಿದ್ದರಿಂದ ಸರಳವಾಗಿ ಆಚರಿಸಲಾಗಿತ್ತು.

ಈ ಬಾರಿ ಮಸೀದಿಗಳಿಗೆ ತೆರಳಿ ಪ್ರಾರ್ಥಿಸಿದ್ದು ಕಂಡುಬಂತು. ಹೊಸಬಟ್ಟೆ ತೊಟ್ಟು ಬಂದಿದ್ದ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ
ಯಲ್ಲಿ ಪಾಲ್ಗೊಂಡಿದ್ದರು. ಧರ್ಮ ಗುರುಗಳು ಸಂದೇಶ ನೀಡಿದರು.

ADVERTISEMENT

ಇದೇ ವೇಳೆ ಅಲ್ಲಾಹುವನ್ನು ಸ್ಮರಿಸಲಾಯಿತು. ಕಲಾಸಿಪಾಳ್ಯ, ಚಾಮರಾಜಪೇಟೆ, ಶಿವಾಜಿನಗರ, ಬಿಟಿಎಂ ಲೇಔಟ್, ಪಾದ‌ರಾಯನಪುರ, ಹೆಬ್ಬಾಳ, ‌ಆರ್.ಟಿ. ನಗರ, ಶಾಂತಿನಗರ, ಮೈಸೂರು ರಸ್ತೆ, ಜಯನಗರ, ಲಾಲ್‍ಬಾಗ್ ರಸ್ತೆ, ಮಾಗಡಿ ರಸ್ತೆ
ಮತ್ತು ಕಮ್ಮಗೊಂಡನಹಳ್ಳಿ ಸೇರಿ ದಂತೆ ನಗರದ ವಿವಿಧೆಡೆಯ ಪ್ರಮುಖ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸ ಲಾಯಿತು.

ಮಸೀದಿಗಳ ಎದುರು ಗುಲಾಬಿ ಹೂವಿನ ಮಾರಾಟದ ವ್ಯವಸ್ಥೆ ಇತ್ತು. ಪುಟ್ಟ ಮಕ್ಕಳು, ದೊಡ್ಡವರು ಹೊಸ
ಬಟ್ಟೆ, ಟೋಪಿಯೊಂದಿಗೆ ಕಂಗೊಳಿಸಿ ದರು. ಮಕ್ಕಳು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬದ ಅಂಗವಾಗಿ ಮನೆಗಳಲ್ಲೂ ವಿಶೇಷ ಖಾದ್ಯ ತಯಾರಿಸಲಾಗಿತ್ತು.

ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾಗವಹಿಸಿ, ಮುಸ್ಲಿಮರಿಗೆ ಶುಭಾಶಯ ಕೋರಿದರು.

ಶಾಸಕ ಜಮೀರ್ ಅಹಮದ್ ಹಾಗೂ ಅವರ ಪುತ್ರ ಜಾಯೇದ್‌ ಖಾನ್ ಪಾಲ್ಗೊಂಡಿದ್ದರು.

ನಂತರ, ಸಿದ್ದರಾಮಯ್ಯ ಅವರು ಮಲೆಮಹದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥಿಸಿ ದರು. ಪಾಲಿಕೆ ಮಾಜಿ ಸದಸ್ಯ ಚಂದ್ರ ಶೇಖರ್‌ ಹಾಜರಿದ್ದರು. ನಗರದ ಪ್ರಮುಖ ಮಸೀದಿಗಳ ಬಳಿ ಭದ್ರತೆಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸ
ಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.