ADVERTISEMENT

ಬೆಂಗಳೂರು | ಬಾಣಸವಾಡಿ ಕೆರೆ ಒತ್ತುವರಿ; ತಹಶೀಲ್ದಾರ್‌ಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 15 ಜುಲೈ 2023, 17:30 IST
Last Updated 15 ಜುಲೈ 2023, 17:30 IST
ತ್ಯಾಜ್ಯದ ಗುಂಡಿಯಾಗಿರುವ ಬಾಣಸವಾಡಿ ಕೆರೆ
ತ್ಯಾಜ್ಯದ ಗುಂಡಿಯಾಗಿರುವ ಬಾಣಸವಾಡಿ ಕೆರೆ   

ಬೆಂಗಳೂರು: ಬಾಣಸವಾಡಿ ಕೆರೆ ಒತ್ತುವರಿ ಪ್ರಕರಣವನ್ನು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಸ್ವಪ್ರೇರಣೆಯಿಂದ ದಾಖಲಿಸಿಕೊಂಡು, ಬೆಂಗಳೂರು ಪೂರ್ವ ತಾಲ್ಲೂಕು ತಹಶೀಲ್ದಾರ್‌ಗೆ ನೋಟಿಸ್‌ ಜಾರಿ ಮಾಡಿದೆ.

ಜೂನ್‌ 30ರಂದು ‘ಬಾಣಸವಾಡಿ ಕೆರೆ ಮತ್ತೊಮ್ಮೆ ಒತ್ತುವರಿ’ ಶೀರ್ಷಿಕೆಯಡಿ ‘ಪ‍್ರಜಾವಾಣಿ’ ವರದಿ ಪ್ರಕಟಿಸಿತ್ತು . ಇದನ್ನು ಪರಿಗಣಿಸಿರುವ ನ್ಯಾಯಾಲಯ, ಕೃಷ್ಣರಾಜಪುರ ಬಾಣಸವಾಡಿ ಸರ್ವೆ ನಂ. 211ರಲ್ಲಿ 42 ಎಕರೆ 38 ಗುಂಟೆ ಕೆರೆ ಅಂಗಳದಲ್ಲಿ ಮೂರನೇ ಬಾರಿಗೆ ಒತ್ತುವರಿಯಾಗಿದೆ. ಕಟ್ಟಡಗಳು ನಿರ್ಮಾಣವಾಗಿವೆ. ಈ ಬಗ್ಗೆ ವರದಿ ನೀಡಬೇಕು ಎಂದು ಸೂಚಿಸದೆ.

ಕೆರೆ ಅಂಗಳದ ಅತಿಕ್ರಮಣದ ಬಗ್ಗೆ, ಅತಿಕ್ರಮಣ ಮಾಡಿದ ವ್ಯಕ್ತಿಗಳು ಮತ್ತು ಪ್ರತಿಯೊಬ್ಬರ ಒತ್ತುವರಿಯ ವಿಸ್ತೀರ್ಣ ಹಾಗೂ ಸವಿವರವಾದ ಸರ್ವೆ ಸ್ಕೆಚ್‌ ಜೊತೆಗೆ ಆ.18ರೊಳಗೆ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ತಹಶೀಲ್ದಾರ್‌ ಗೆ ಸೂಚಿಸಲಾಗಿದೆ ಎಂದು ಸರ್ಕಾರಿ ಅಭಿಯೋಜಕರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.