ADVERTISEMENT

ಬೆಂಗಳೂರು | ರೌಡಿಶೀಟರ್‌ ಮೇಲೆ ಹಲ್ಲೆ: ಮೂವರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2024, 16:26 IST
Last Updated 29 ಸೆಪ್ಟೆಂಬರ್ 2024, 16:26 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಬೆಂಗಳೂರು: ಕಪಿಲಾನಗರದಲ್ಲಿ ಮನೆಗೆ ನುಗ್ಗಿ ರೌಡಿಶೀಟರ್‌ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಇರಿದಿದ್ದ ಪ್ರಕರಣ ಸಂಬಂಧ ರೌಡಿ ಶೀಟರ್‌ಗಳು ಸೇರಿದಂತೆ ಮೂರು ಮಂದಿಯನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಭಾನುವಾರ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನೆಯಲ್ಲಿ ನಂದಿನಿ ಲೇಔಟ್‌ ಪೊಲೀಸ್‌ ಠಾಣೆಯ ರೌಡಿ ಪಟ್ಟಿಯಲ್ಲಿರುವ ನರೇಂದ್ರ ಅಲಿಯಾಸ್‌ ದಾಸ್‌ ಸೇರಿದಂತೆ ಐವರು ಹಲ್ಲೆಗೆ ಒಳಗಾಗಿದ್ದರು. ರಮೇಶ್‌ ಅಲಿಯಾಸ್ ಬಿಳಿಲು, ಸಂಕೇತ್ (ಇಬ್ಬರೂ ರೌಡಿಶೀಟರ್‌), ತೇಜಸ್‌ ಅಲಿಯಾಸ್ ಟೈಗರ್, ಮಂಜುನಾಥ್, ದೀಕ್ಷಿತ್, ಅರುಣ್ ವಿರುದ್ಧ ಪ್ರಕರಣ ದಾಖಲಾಗಿತ್ತು.

ADVERTISEMENT

‘ನರೇಂದ್ರ ಹಾಗೂ ರಮೇಶ್ ಸಹಚರರ ಮಧ್ಯೆ ಹಳೇ ದ್ವೇಷವಿತ್ತು. ಎರಡೂ ಕಡೆಯವರು ಹಲವು ಬಾರಿ ಗಲಾಟೆ ಮಾಡಿಕೊಂಡಿದ್ದರು. ರಮೇಶ್ ಮತ್ತು ಸಹಚರರು ನರೇಂದ್ರ ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದರು. ಪ್ರಕರಣ ಸಂಬಂಧ ಮೂವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಲಾಂಗ್ ಹಾಗೂ ಇತರೆ ಮಾರಾಕಸ್ತ್ರಗಳನ್ನು ಹಿಡಿದು ರಸ್ತೆಯಲ್ಲಿ ಓಡಾಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಲೆಮರೆಸಿಕೊಂಡಿರುವ ಉಳಿದವರ ಬಗ್ಗೆಯೂ ಮಾಹಿತಿ ದೊರೆತಿದ್ದು, ಶೀಘ್ರ ಬಂಧಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.