ADVERTISEMENT

ಎಸ್‌.ಎಂ. ಕೃಷ್ಣಗೆ ‘ಬಿಎಂಎ ಜೀವಮಾನ ಸಾಧನೆ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 27 ಜುಲೈ 2023, 15:23 IST
Last Updated 27 ಜುಲೈ 2023, 15:23 IST
ನಗರದಲ್ಲಿ ಶನಿವಾರ 'ವಿಕಾಸ ಪ್ರಕಾಶನ' ಮತ್ತು' ಅಖಿಲ ಕರ್ನಾಟಕ ಮೋಟಮ್ಮ ಅಭಿಮಾನಿಗಳ ಸಂಘ' ಜಂಟಿಯಾಗಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಭಾಗವಹಿಸಿದ್ದರು -ಪ್ರಜಾವಾಣಿ ಚಿತ್ರ/ ರಂಜು ಪಿ
ನಗರದಲ್ಲಿ ಶನಿವಾರ 'ವಿಕಾಸ ಪ್ರಕಾಶನ' ಮತ್ತು' ಅಖಿಲ ಕರ್ನಾಟಕ ಮೋಟಮ್ಮ ಅಭಿಮಾನಿಗಳ ಸಂಘ' ಜಂಟಿಯಾಗಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಭಾಗವಹಿಸಿದ್ದರು -ಪ್ರಜಾವಾಣಿ ಚಿತ್ರ/ ರಂಜು ಪಿ   

ಬೆಂಗಳೂರು: ‘ಬೆಂಗಳೂರು ಮ್ಯಾನೇಜ್‌ಮೆಂಟ್‌ ಅಸೋಸಿಯೇಷನ್‌ನಿಂದ (ಬಿಎಂಎ) ನೀಡುವ ಜೀವಮಾನ ಸಾಧನೆ ಪ್ರಶಸ್ತಿಗೆ ಬಿಜೆಪಿ ಮುಖಂಡ ಎಸ್.ಎಂ. ಕೃಷ್ಣ ಆಯ್ಕೆಯಾಗಿದ್ದಾರೆ’ ಎಂದು ಅಸೋಸಿಯೇಷನ್‌ ಅಧ್ಯಕ್ಷ ಕೆ.ಎನ್. ನಾರಾಯಣಸ್ವಾಮಿ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜುಲೈ 29ರಂದು ದಿ ಚಾನ್ಸರಿ ಪೆವಿಲಿಯನ್‌ ಹೋಟೆಲ್‌ನಲ್ಲಿ ನಡೆಯುವ ಬಿಎಂಎ 66ನೇ ವಾರ್ಷಿಕ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ’ ಎಂದು ತಿಳಿಸಿದರು.

‘ಭಾರತೀಯ ವಾಣಿಜ್ಯ ಮತ್ತು ಕೈಗಾರಿಕೆಗಳ ಮಹಾಸಂಸ್ಥೆಗಳ ಒಕ್ಕೂಟ (ಎಫ್‌ಐಸಿಸಿಐ) ಅಧ್ಯಕ್ಷ ಕೆ. ಉಲ್ಲಾಸ್‌ ಕಾಮತ್‌ ಅವರಿಗೆ ‘ಬಿಎಂಎ ಅವಾರ್ಡ್‌ ಆಫ್‌ ಎಕ್ಸಲೆನ್ಸ್‌’ ಪ್ರದಾನ ಮಾಡಲಾಗುತ್ತದೆ. ಉದ್ಯಮಿ ಸಮರ್ಥ ರಾಘವ ನಾಗಭೂಷಣಂ, ಸಿಎಂಆರ್ ವಿಶ್ವವಿದ್ಯಾಲಯದ ಕುಲಪತಿ ಸಬಿತಾ ರಾಮಮೂರ್ತಿ, ಸೇಂಟ್‌ ಜೋಸೆಫ್‌ ಕಾಲೇಜಿನ ಫಾದರ್‌ ವಿಕ್ಟರ್‌ ಲೋಬೋ, ಪ್ಯಾರಾ ಒಲಂಪಿಯನ್ ಎಚ್.ಎನ್. ಗಿರೀಶ್, ಆರ್‌.ವಿ. ವಿಶ್ವವಿದ್ಯಾಲಯ ಉಪಕುಲಪತಿ ವೈ.ಎಸ್.ಆರ್ ಮೂರ್ತಿ, ಕಂಬಳ ಶ್ರೀನಿವಾಸ್, ಎಫ್‌ಕೆಸಿಸಿಐ ನಿಕಟಪೂರ್ವ ಅಧ್ಯಕ್ಷ ಐ.ಎಸ್. ಪ್ರಸಾದ್ ಅವರಿಗೆ ‘ಬಿಎಂಎ ಸಾಧಕ ಪ್ರಶಸ್ತಿಗಳನ್ನು’ ಪ್ರದಾನ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.