ADVERTISEMENT

Photos | ಮಳೆಯ ಪಿಕ್ಚರ್‌ ಪ್ಯಾಲೇಸ್

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 4:59 IST
Last Updated 19 ಅಕ್ಟೋಬರ್ 2024, 4:59 IST
   
ಚಿತ್ತೀ ಮಳಿ ತತ್ತೀ ಹಾಕುತಿತ್ತು ಸ್ವಾತಿ ಮುತ್ತಿನೊಳಗ ಅಂತ ಬೇಂದ್ರೆ ಅಜ್ಜಾರು ಹಾಡ್ಯಾರ. ಹಂಗೆ ಈ ಹಿಂಗಾರು ಮಳಿಯೊಳಗ ಚಿತ್ತೀಮಳಿ ಮೋಡ ಇದ್ದಲ್ಲಷ್ಟೇ ಸುರಿಯುವುದು. ಗಾಳಿಗೆ ಬೀಸುವುದಿಲ್ಲ. ಸುರಿದಲ್ಲೆಲ್ಲ ಗುಂಡಿ ಮಾಡುವ ಚಿತ್ತಾಮಳೆಯ ಗುಣದಿಂದ ಬೆಂಗಳೂರೆಂಬೋ ಬೆಂಗಳೂರು ಹೈರಾಣಾಯ್ತು. ಮಲೆನಾಡಿನ ಕಾಡುಗಳಲ್ಲಿ ಅಣಬೆಗಳಂತೆ ಬಣ್ಣಬಣ್ಣದ ಛತ್ರಿ ಹಿಡಿದು ಜನರು ಹೊರಬಂದರು. ಕೊಳೆಯೆಲ್ಲ ತೊಳೆದೊಯ್ದ ಮಳೆ ಇದು ಎಂದು ಮಹಾನಗರಪಾಲಿಕೆಯವರು ದೊಡ್ಡದೊಡ್ಡಕಾಲುವೆಯಲ್ಲಿ ಹರಿದು ಬಂದ ಬಟ್ಟೆಗಳನ್ನೆಲ್ಲ ತೆಗೆದು, ನೀರಿಗೆ ದಾರಿ ಮಾಡಿದರು.
<div class="paragraphs"><p>-ಪ್ರಜಾವಾಣಿ ಚಿತ್ರ/ಎಂ.ಎಸ್.ಮಂಜುನಾಥ್</p></div>

ನಗರದಲ್ಲಿ ಗುರುವಾರ ರಾತ್ರಿ ಬಂದ ಮಳೆನೀರು ಚಿಕ್ಕಲ್ಲಸಂದ್ರ ವಾರ್ಡ್ ರಾಜಕಾಲುವೆಯಲ್ಲಿ ನೀರು ಹೋಗಲು ಸಾಧ್ಯವಾಗದ ಕಾರಣ ಉಕ್ಕಿ ಕಾಮಾಕ್ಯ ಬಡಾವಣೆಯ ಮನೆಗಳಿಗೆ ತುಂಬಿದ ನೀರನ್ನು ಸ್ವಚ್ಛಗೊಳಿಸುತ್ತಿರುವ ದೃಶ್ಯ

ನಗರದಲ್ಲಿ ಗುರುವಾರ ರಾತ್ರಿ ಬಂದ ಮಳೆನೀರು ಚಿಕ್ಕಲ್ಲಸಂದ್ರ ವಾರ್ಡ್, ಕಾಮಾಕ್ಯ ರಾಜಕಾಲುವೆಯಲ್ಲಿ ಮಳೆ ನರು ಹೋಗುವಂತೆ ಬಿಬಿಎಂಪಿ ಸಿಬ್ಬಂದಿಗಳು ಕಸಗಳನ್ನು ತೆಗೆಯುತ್ತಿರುವ ದೃಶ್ಯ

ADVERTISEMENT

ಈಶಾನ್ಯ ಮಾನ್ಸೂನ್ ಆರಂಭವಾದ ಹಿನ್ನಲೆ ಬೆಂಗಳೂರು ನಗರದಲ್ಲಿ ರಾತ್ರಿ ಮತ್ತು ಮಂಗಳವಾರ ಮಳೆ ಸುರಿದಿದ್ದು, ಕೆಲಸಕ್ಕೆ ಹೊರಟಿದ್ದ ಜನರು ಮೈಸೂರು ರಸ್ತೆಯಲ್ಲಿ ಕೊಡೆ ಹಿಡಿದು ಬಸ್ಸಿಗಾಗಿ ಕಾಯುತ್ತಿರುವ ದೃಶ್ಯ ಕಂಡುಬಂತು.

ತುಂತುರು ಮಳೆಗೆ ಸೋಮವಾರ ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಜನರು ಛತ್ರಿ ಹಿಡಿದುಕೊಂಡು ಬಸ್ ಗೆ ಕಾಯುತ್ತಿರುವುದು.


ಪ್ರಜಾವಾಣಿ ಚಿತ್ರ: ಎಸ್‌.ಕೆ.ದಿನೇಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.