ಬೆಂಗಳೂರು: ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇದೀಗ ಆಯುಕ್ತರಿಗೆ ಕನ್ನಡದಲ್ಲಿ ಗೌರವ ವಂದನೆ ನೀಡಲಾಗುತ್ತಿದೆ.
ಈ ವಿಡಿಯೊವನ್ನು ಹಂಚಿಕೊಂಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ‘ಕನ್ನಡದ ಮಾತು ಚಂದ ; ಕನ್ನಡದ ಕಮಾಂಡ್‌ಗಳು ಇನ್ನೂ ಚಂದ. ಏನಂತಿರಾ...’ ಎಂದಿದ್ದಾರೆ.
ಆಯುಕ್ತರು ತಮ್ಮ ಕಚೇರಿಗೆ ಬಂದ ತಕ್ಷಣ ಸಿಬ್ಬಂದಿ ಅವರಿಗೆ ಕನ್ನಡದಲ್ಲಿ ಗೌರವ ವಂದನೆ ನೀಡುತ್ತಾರೆ. ಮೊದಲಿಗೆ ‘ವಾಹನ ಪಡೆ ವಂದನಾ ಶಸ್ತ್ರ’ ಎಂದು ಶಸ್ತ್ರವನ್ನು ಏರಿಸಿ ಸೆಲ್ಯೂಟ್ ಮಾಡುತ್ತಾರೆ. ನಂತರ ‘ವಾಹನ ಪಡೆ ಕೆಳ ಶಸ್ತ್ರ‘ ಎಂದು ಬಂದೂಕನ್ನು ಕೆಳಕ್ಕೆ ಇಳಿಸುತ್ತಾರೆ.
ನಂತರ, ‘ಮಾನ್ಯರೇ, ವಾಹನ ಪಡೆಯು ಪರಿವೀಕ್ಷಣೆಗೆ ಸಜ್ಜಾಗಿದೆ’ ಎಂದು ಹೇಳುತ್ತಾರೆ. ಆಯುಕ್ತರು ಅದಕ್ಕೆ ಸರಿ ಎಂದು ಹೊರಡುತ್ತಾರೆ.
ಈ ಮೊದಲು ಹಿಂದಿಯಲ್ಲಿರುತ್ತಿದ್ದ ಈ ಕಮಾಂಡ್‌ಗಳು ಈಗ ಕನ್ನಡಕ್ಕೆ ಭಾಷಾಂತರಿಸಿ ಆಯುಕ್ತರ ಕಚೇರಿ ಸಿಬ್ಬಂದಿ ಬಳಸುತ್ತಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಬೆಂಬಲ, ಪ್ರಶಂಸೆ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.