ಬೆಂಗಳೂರು: ಟೋಕಿಯೊ-ಬೆಂಗಳೂರು ನಡುವೆ ವಾರದಲ್ಲಿ ಐದು ದಿನ ವಿಮಾನಗಳು ಸಂಚರಿಸಲಿವೆ ಎಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ಹಾಗೂ ಜಪಾನ್ ಏರ್‌ಲೈನ್ಸ್ (ಜೆಎಎಲ್) ತಿಳಿಸಿವೆ.
ಈ ಮಾರ್ಗದಲ್ಲಿ ಪ್ರಸ್ತುತ ವಾರಕ್ಕೆ ಮೂರು ವಿಮಾನಗಳು ಮಾತ್ರ ಸಂಚರಿಸುತ್ತಿವೆ. ಅಕ್ಟೋಬರ್ ಕೊನೆಯ ವಾರದಿಂದ ಐದು ವಿಮಾನಗಳ ಸಂಚಾರ ಆರಂಭವಾಗಲಿದೆ.
ಬಿಐಎಎಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಕಿ ರಘುನಾಥ್ ಮಾತನಾಡಿ, ‘2020ರ ಏಪ್ರಿಲ್ 12 ರಂದು ಬೆಂಗಳೂರು ವಿಮಾನ ನಿಲ್ದಾಣದಿಂದ ಜಪಾನ್ ಏರ್‌ಲೈನ್ಸ್ ಕಾರ್ಯಾಚರಣೆ ಆರಂಭಿಸಿತು. ಅಂದಿನಿಂದ ಬೆಂಗಳೂರು ಮತ್ತು ಜಪಾನ್ ನಡುವೆ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. 2022ರಲ್ಲಿ 23,532 ಪ್ರಯಾಣಿಕರು ಮತ್ತು 2023 ರಲ್ಲಿ 62,959 ಪ್ರಯಾಣಿಕರು ಈ ಮಾರ್ಗವಾಗಿ ಪ್ರಯಾಣಿಸಿದ್ದಾರೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.