ADVERTISEMENT

₹20 ಕೋಟಿ ಬಾಕಿ: ಬ್ಯಾಂಕ್ ಆಫ್ ಬರೋಡಾ, ಅಂಚೆ ಕಚೇರಿಗೆ ಬೀಗ ಜಡಿದ ಬಿಬಿಎಂಪಿ

ಬಿಬಿಎಂಪಿಗೆ ಬಾಡಿಗೆ ಪಾವತಿಸದ ಸಂಸ್ಥೆಗಳು; ₹20 ಕೋಟಿ ಬಾಕಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 16:05 IST
Last Updated 6 ಜುಲೈ 2024, 16:05 IST
ಎಂ.ಜಿ.ರಸ್ತೆಯಲ್ಲಿರುವ ಪಿಯುಬಿ ಕಟ್ಟಡದ ನೆಲ ಅಂತಸ್ತಿನಲ್ಲಿರುವ ಅಂಚೆ ಕಚೇರಿಗೆ ಬಿಬಿಎಂಪಿ ಸಿಬ್ಬಂದಿ ಶನಿವಾರ ಬೆಳಿಗ್ಗೆ ಬೀಗ ಹಾಕಿದರು
ಎಂ.ಜಿ.ರಸ್ತೆಯಲ್ಲಿರುವ ಪಿಯುಬಿ ಕಟ್ಟಡದ ನೆಲ ಅಂತಸ್ತಿನಲ್ಲಿರುವ ಅಂಚೆ ಕಚೇರಿಗೆ ಬಿಬಿಎಂಪಿ ಸಿಬ್ಬಂದಿ ಶನಿವಾರ ಬೆಳಿಗ್ಗೆ ಬೀಗ ಹಾಕಿದರು   

ಬೆಂಗಳೂರು: ನಗರದ ಎಂ.ಜಿ.ರಸ್ತೆಯಲ್ಲಿರುವ ಪಿಯುಬಿ ಕಟ್ಟಡದ ನೆಲ ಅಂತಸ್ತಿನಲ್ಲಿರುವ ಬ್ಯಾಂಕ್ ಆಫ್ ಬರೋಡಾ (ವಿಜಯಾ ಬ್ಯಾಂಕ್) ಹಾಗೂ ಅಂಚೆ ಕಚೇರಿಗಳು ಬಾಡಿಗೆ ಪಾವತಿಸದ್ದರಿಂದ ಬಿಬಿಎಂಪಿ ಸಿಬ್ಬಂದಿ ಶನಿವಾರ ಬೆಳಿಗ್ಗೆ ಬೀಗ ಹಾಕಿದ್ದಾರೆ.

ಪಿಯುಬಿ ಕಟ್ಟಡದ ನೆಲ ಅಂತಸ್ತಿನಲ್ಲಿರುವ ಮಳಿಗೆ ಸಂಖ್ಯೆ 14/15 ಬ್ಯಾಂಕ್ ಆಫ್ ಬರೋಡಾ (ವಿಜಯಾ ಬ್ಯಾಂಕ್) ಮತ್ತು ಮಳಿಗೆ ಸಂಖ್ಯೆ 17, ಅಂಚೆ ಕಚೇರಿಗಳಿವೆ.

ಬ್ಯಾಂಕ್ ಆಫ್ ಬರೋಡಾದವರು 2011ರಿಂದ ಹಳೆಯ ಬಾಡಿಗೆಯನ್ನು ಪಾವತಿಸುತ್ತಿದ್ದು, ಪರಿಷ್ಕೃತ ಬಾಡಿಗೆ ಪಾವತಿಸುತ್ತಿರುವುದಿಲ್ಲ. ಅಲ್ಲದೆ, ಡಿಸೆಂಬರ್ 2022ರಿಂದ ಯಾವುದೇ ಬಾಡಿಗೆಯನ್ನು ಪಾವತಿಸಿಲ್ಲ. ಈ ಬಗ್ಗೆ ಹಲವು ಬಾರಿ ನೋಟಿಸ್‌ ಜಾರಿ ಮಾಡಿದ್ದರೂ ಸ್ಪಂದಿಸಿಲ್ಲ. ಪಾಲಿಕೆಗೆ ಬ್ಯಾಂಕ್ ಆಫ್ ಬರೋಡಾ ₹17.56 ಕೋಟಿ ಬಾಡಿಗೆ ಪಾವತಿಸಬೇಕಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಅಂಚೆ ಕಚೇರಿಯವರು 2006ರಿಂದ ಹಳೆಯ ಬಾಡಿಗೆಯನ್ನು ಪಾವತಿಸುತ್ತಿದ್ದು, ಪರಿಷ್ಕೃತ ಬಾಡಿಗೆಯನ್ನು ಪಾವತಿಸುತ್ತಿರುವುದಿಲ್ಲ. ಪರಿಷ್ಕೃತ ಬಾಡಿಗೆಯನ್ನು ಪಾವತಿಸುವಂತೆ ನೋಟಿಸ್‌ ನೀಡಲಾಗಿದ್ದರೂ, ಪಾವತಿಸಿರುವುದಿಲ್ಲ. ₹ 2.32 ಕೋಟಿ ಬಾಡಿಗೆ ಪಾವತಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.