ADVERTISEMENT

ಈ ಸಾಲಿನ ‘ಬನ್ನಂಜೆ ಗೋವಿಂದಾಚಾರ್ಯ ಪುರಸ್ಕಾರ’ಕ್ಕೆ ಪ್ರೊ. ಬಿ.ಎಂ.ರಮೇಶ್‌ ಆಯ್ಕೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 11:43 IST
Last Updated 5 ನವೆಂಬರ್ 2024, 11:43 IST
<div class="paragraphs"><p>ಬಿ.ಎಂ.ರಮೇಶ್</p></div>

ಬಿ.ಎಂ.ರಮೇಶ್

   

ಬೆಂಗಳೂರು: ಈ ಸಾಲಿನ ಬನ್ನಂಜೆ ಗೋವಿಂದಾಚಾರ್ಯ ಪುರಸ್ಕಾರಕ್ಕೆ ಕೆನಡಾದ ಮಣಿತೋಬಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಸಮಾಜ ವಿಜ್ಞಾನಿ ಪ್ರೊ. ಬಿ.ಎಂ.ರಮೇಶ್ ಅವರನ್ನು ಆಯ್ಕೆ ಮಾಡಿದೆ.

ರಮೇಶ್ ಅವರು ವೇದವ್ಯಾಸರ ಮಹಾಭಾರತದ ಮೂಲ ಆವೃತ್ತಿಯನ್ನು ಸಂಸ್ಕೃತದಿಂದ ಕನ್ನಡಕ್ಕೆ ಭಾಷಾಂತರ, ಮಹಾಭಾರತದ ವಿವರಣೆಯನ್ನು ವೇದ, ಇತಿಹಾಸ, ಪುರಾಣಗಳಲ್ಲಿ ಬರುವ ಕಥೆ, ಉಪಕಥೆಗಳ ಜತೆ ಕೊಂಡಿ ಬೆಸೆಯುವ ಕಾರ್ಯವೂ ಸೇರಿ ಸಂಸ್ಕೃತಿಯ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಮಹಾಭಾರತದ ವಿಶ್ವಕೋಶವನ್ನೇ ರಚಿಸಿದ್ದಾರೆ. ಇದನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ಮುಖ್ಯ ಟ್ರಸ್ಟಿ ವೀಣಾ ಬನ್ನಂಜೆ ಅವರು ತಿಳಿಸಿದ್ದಾರೆ.

ADVERTISEMENT

ಮಲ್ಲೇಪುರಂ ಜಿ.ವೆಂಕಟೇಶ್‌, ಎಚ್‌.ವಿ.ನಾಗರಾಜ ರಾವ್‌ ಮತ್ತು ಉಮಾಶಂಕರ ಭಟ್ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಈ ತೀರ್ಮಾನ ತೆಗೆದುಕೊಂಡಿದೆ. ಡಿ.13 ರಂದು ನಗರದ ಗಾಯನ ಸಮಾಜದಲ್ಲಿ ನಡೆಯುವ ಗೋವಿಂದಾಚಾರ್ಯರ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಶಸ್ತಿಯು ₹50 ಸಾವಿರ ಗೌರವಧನ, ಫಲಕ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ರಮೇಶ್ ಅವರು ಕೆನಡಾದ ಮನಿತೋಬಾ ವಿಶ್ವವಿದ್ಯಾಲಯದ ವೈದ್ಯಕೀಯ ಶಾಲೆಯ ಸಮುದಾಯ ಆರೋಗ್ಯ ವಿಭಾಗದ ತಾಯಿ ಮತ್ತು ನವಜಾತ ಶಿಶು ಸ್ವಾಸ್ಥ್ಯಕ್ಕೆ ಸಂಬಂಧಪಟ್ಟ ಯೋಜನೆಗಳನ್ನು ಕರ್ನಾಟಕ ಮತ್ತು ಉತ್ತರ ಪ್ರದೇಶಗಳಲ್ಲಿ ಜಾರಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.