ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿಎರಡು ಹುಲಿಗಳು ಪರಸ್ಪರ ಕಾದಾಡಿದ್ದು, ಆ ದೃಶ್ಯ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಾಡಿನಲ್ಲಿ ಮುಕ್ತವಾಗಿ ಬದುಕುತ್ತಿರುವ ಹುಲಿಯೊಂದು ಈಚೆಗೆ ಸಫಾರಿ ಹುಲಿಗಳ ಸಮೀಪ ಸುಳಿದಾಡುತ್ತಿತ್ತು. ಈಗ ಕ್ಯಾಮೆರಾದಲ್ಲಿ ಸೆರೆ ಆಗಿರುವುದು ಅದೇ ಹುಲಿ ಎನ್ನುವುದು ವಿಶೇಷ.
ಪ್ರವಾಸಿಗರು ಸಫಾರಿಗೆ ಹೊರಟಿದ್ದಾಗಲೇ ಹುಲಿಗಳು ಕಾದಾಟಕ್ಕೆ ಇಳಿದಿದ್ದವು. ಎರಡೂ ಹುಲಿಗಳ ನಡುವೆ ಬೇಲಿ ಇದ್ದಿದ್ದರಿಂದ ಯಾವುದೇ ಗಾಯವಾಗಿಲ್ಲ. ಮೂರು ನಿಮಿಷಗಳವರೆಗೆ ಕಾದಾಡಿದ ಹುಲಿಗಳು, ನಂತರ ಸ್ಥಳದಿಂದ ಹೊರಟು ಹೋಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.