ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಜೀಬ್ರಾ ಮರಿಯೊಂದಕ್ಕೆ ಜನ್ಮ ನೀಡಿದ್ದು ನೂತನ ಅತಿಥಿ ಆಗಮನದಿಂದಾಗಿ ಜೀಬ್ರಾ ಕುಟುಂಬದ ಸಂಖ್ಯೆ ಐದಕ್ಕೇರಿದೆ ಎಂದು ಉದ್ಯಾನದ ಪಶುವೈದ್ಯಕೀಯ ವಿಭಾಗದ ಸಹಾಯಕ ನಿರ್ದೇಶಕ ಡಾ.ಕೆ.ಎಸ್.ಉಮಾಶಂಕರ್
ತಿಳಿಸಿದ್ದಾರೆ.
ಉದ್ಯಾನದ ಜೀಬ್ರಾ ಕಾವೇರಿ ಮತ್ತು ಭರತ್ ಜೋಡಿಗೆ ಮರಿ ಜನಿಸಿದೆ. ತಾಯಿ ಮತ್ತು ಮರಿ ಆರೋಗ್ಯವಾಗಿದ್ದು ಪಶುವೈದ್ಯಕೀಯ ತಂಡ ಮತ್ತು ಪ್ರಾಣಿಪಾಲಕರ ವೀಕ್ಷಣೆಯಲ್ಲಿ ವಿಶೇಷ ಕಾಳಜಿ ವಹಿಸಿ ತಾಯಿ ಮತ್ತು ಮರಿಯನ್ನು ಆರೈಕೆ ಮಾಡಲಾಗುತ್ತಿದೆ ಎಂದರು.
ಜೈವಿಕ ಉದ್ಯಾನದ ಉಪನಿರ್ದೇಶಕ ಹರೀಶ್ ಮಾತನಾಡಿ ಮೃಗಾಲಯಕ್ಕೆ ಭೇಟಿ ನೀಡುವ ಸಂದರ್ಶಕರು ಮರಿಯನ್ನು ವೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.