ದಾಬಸ್‌ಪೇಟೆ: ಸೋಂಪುರ ಹೋಬಳಿ ವ್ಯಾಪ್ತಿಯ ಗ್ರಾಮ ಹಾಗೂ ದೇವಾಲಯಗಳಲ್ಲಿ ಶುಕ್ರವಾರ ಬಸವ ಜಯಂತಿ ನಡೆಯಿತು.
ಗ್ರಾಮೀಣ ಭಾಗದಲ್ಲಿ ರೈತ ಸಮುದಾಯ ತಮ್ಮ ಮನೆಗಳ ರಾಸುಗಳ ಮೈ ತೊಳೆದು, ಸಿಂಗರಿಸಿ ಪೂಜೆ ಸಲ್ಲಿಸಿ ಬಸವ ಜಯಂತಿ ಆಚರಿಸಿದರು. ಶಿರಗನಹಳ್ಳಿ, ನಿಡವಂದ, ಮಾದೇನಹಳ್ಳಿ, ಲಕ್ಕೂರು ತೋಟ, ಹೊನ್ನೇನಹಳ್ಳಿ, ತಟ್ಟೆಕೆರೆ, ಗ್ರಾಮಗಳಲ್ಲಿನ ಬಸವಣ್ಣ ದೇವಾಲಯಗಳು ಹಾಗೂ ಉಳಿದ ಗ್ರಾಮಗಳ ವಿವಿಧ ದೇವಾಲಯಗಳಲ್ಲಿ ತಳಿರು ತೋರಣ ಕಟ್ಟಿ, ದೇವರಿಗೆ ಪೂಜೆ ಮಾಡಿ ಹೆಸರು ಬೇಳೆ ಪಾನಕ, ಮಜ್ಜಿಗೆ ಹಂಚಿದರು. ಹೋಬಳಿಯ ಸರ್ಕಾರಿ ಕಚೇರಿಗಳು, ಶಾಲೆಗಳಲ್ಲಿ ಬಸವಣ್ಣನವರ ಭಾವಚಿತ್ರವಿಟ್ಟು ಪೂಜೆ ನಡೆಸಿದರು.
12ನೇ ಶತಮಾನದಲ್ಲಿ ಜನಿಸಿದ ಬಸವಣ್ಣನವರು ಯಾವುದೇ ಜಾತಿ, ಮತ ಪಂಗಡಕ್ಕೆ ಸೇರದೆ ಜಾತಿ ರಹಿತ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಕ್ರಾಂತಿ ಪುರುಷ. ಅವರ ಆದರ್ಶಗಳನ್ನು ಎಲ್ಲ ವರ್ಗದ ಜನರು ಅಳವಡಿಸಿಕೊಂಡರೆ ಸಮಾಜ ಸುಧಾರಣೆಯಾಗುತ್ತದೆ ಎಂದು ಶಿಕ್ಷಕ ಎನ್.ಆರ್.ರಮೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.