ಬೆಂಗಳೂರು: ನಗರದಲ್ಲಿ 8 ಸಾವಿರ ಸಸಿಗಳನ್ನು ನೆಡುವವೃಕ್ಷ ಸೇನೆ ಯೋಜನೆಗೆ ಮೇಯರ್ ಎಂ.ಗೌತಮ್‌ಕುಮಾರ್ ಹಲಸೂರು ಕೆರೆ ಆವರಣದಲ್ಲಿ ಶನಿವಾರ ಚಾಲನೆ ನೀಡಿದರು.
‘ಸಂಘ ಸಂಸ್ಥೆಗಳು, ಪರಿಸರ ಪ್ರೇಮಿಗಳು ಸಸಿ ನೆಡಲು ಮುಂದಾದರೆ ಪಾಲಿಕೆ ಎಲ್ಲಾ ರೀತಿಯ ಸಹಕಾರ ನೀಡಲಿದೆ. ನಗರವನ್ನು ಹಸಿರುಮಯವಾಗಿಸಿ ಅಂತರ್ಜಲ ಮಟ್ಟ ಹೆಚ್ಚಿಸಲು ಪಾಲಿಕೆಯಿಂದಲೂ ಸಸಿಗಳನ್ನು ನೆಡಲಾಗುವುದು’ ಎಂದು ಮೇಯರ್ ತಿಳಿಸಿದರು.
ಇಂದೋರ್‌ನಲ್ಲಿ ಕಸ ವಿಲೇವಾರಿಗೆ ಬಳಸುವ ಮಾದರಿಯ ಆಟೋ ಟಿಪ್ಪರ್‌ಗಳನ್ನು ಬಿಬಿಎಂಪಿ ಖರೀದಿ ಮಾಡಿದ್ದು, ಇದೇ ವೇಳೆ ಮೇಯರ್ ಅವುಗಳ ಪರಿಶೀಲನೆ ನಡೆಸಿದರು.
‘ಒಂದೇ ಟಿಪ್ಪರ್‌ನಲ್ಲಿ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಬಹುದು. ಇದರಿಂದ ಸಾರ್ವಜನಿಕರು ಮತ್ತು ಪೌರಕಾರ್ಮಿಕರಿಗೆ ಅನುಕೂಲವಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.