ADVERTISEMENT

ಬಿಬಿಎಂಪಿ ಬಜೆಟ್ ನಾಳೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2024, 22:30 IST
Last Updated 27 ಫೆಬ್ರುವರಿ 2024, 22:30 IST
<div class="paragraphs"><p>&nbsp;ಬಿಬಿಎಂಪಿ</p></div>

 ಬಿಬಿಎಂಪಿ

   

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 2024–25ನೇ ಸಾಲಿನ ಬಜೆಟ್‌ ಫೆ.29ರಂದು ಮಂಡನೆ ಆಗಲಿದೆ.

ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲ್ಕೆರೆ ಅವರು ಗುರುವಾರ ಬೆಳಿಗ್ಗೆ 10.30ಕ್ಕೆ ಪುರಭವನದಲ್ಲಿ ಬಜೆಟ್‌ ಮಂಡಿಸಲಿದ್ದಾರೆ. ಚುನಾಯಿತ ಪ್ರತಿನಿಧಿಗಳಿಲ್ಲದೆ ಅಧಿಕಾರಿಗಳು ಆಯವ್ಯಯ ಸಿದ್ಧಪಡಿಸುತ್ತಿರುವುದು ಇದು ಸತತ ನಾಲ್ಕನೇ ವರ್ಷ.

ADVERTISEMENT

2023–24ನೇ ಸಾಲಿನಲ್ಲಿ ₹11,163 ಕೋಟಿಯ ಬಜೆಟ್‌ ಅನ್ನು ಹಣಕಾಸು ವಿಭಾಗದ ಅಂದಿನ ವಿಶೇಷ ಆಯುಕ್ತ ಜಯರಾಂ ರಾಯಪುರ ಅವರು ಮಾರ್ಚ್‌ 2ರಂದು ಮಂಡಿಸಿ, ₹6.14 ಕೋಟಿ ಉಳಿತಾಯವಾಗುತ್ತದೆ ಎಂದು ಬಣ್ಣಿಸಿದ್ದರು. ಆದರೆ, ಬಜೆಟ್‌ನ ಶೇ 25ರಷ್ಟೂ ಅನುಷ್ಠಾನವಾಗಿಲ್ಲ. ಯೋಜನೆಗಳೂ ಆರಂಭವಾಗಿಲ್ಲ.

ಈ ಬಾರಿ ಕಳೆದ ಬಜೆಟ್‌ನ ಗಾತ್ರಕ್ಕಿಂತ ಸುಮಾರು ಶೇ 10ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನವಿಲ್ಲದೆ ತನ್ನದೇ ಸಂಪನ್ಮೂಲವನ್ನು ಒದಗಿಸಿಕೊಂಡು ಯೋಜನೆಗಳನ್ನು ಬಿಬಿಎಂಪಿ ರೂಪಿಸಬೇಕಿದೆ. ಆಸ್ತಿ ತೆರಿಗೆ ಹೆಚ್ಚಳ, ಇತರೆ ಸಂಪನ್ಮೂಲಗಳ ಸಂಗ್ರಹಕ್ಕೆ ಹೆಚ್ಚು ಒತ್ತು ನೀಡಿ, ಹೊಸ ಯೋಜನೆಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.