ADVERTISEMENT

ಬಿಬಿಎಂಪಿ: ವಿದ್ಯಾರ್ಥಿಗಳಿಗೆ ‘ಡೆಂಗಿ ವಾರಿಯರ್’ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 19:04 IST
Last Updated 6 ಜುಲೈ 2024, 19:04 IST
<div class="paragraphs"><p>ಬಿಬಿಎಂಪಿ&nbsp;</p></div>

ಬಿಬಿಎಂಪಿ 

   

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಡೆಂಗಿ ಪ್ರಕರಣಗಳನ್ನು ನಿಯಂತ್ರಿಸಲು ಬಿಬಿಎಂಪಿ ಆರೋಗ್ಯ ವಿಭಾಗವು ನಾಗರಿಕರು, ವಿದ್ಯಾರ್ಥಿಗಳಿಗೆ ‘ಡೆಂಗಿ ವಾರಿಯರ್‌’ ಸ್ಪರ್ಧೆ ಆಯೋಜಿಸಿದೆ.

ಡೆಂಗಿ ನಿಯಂತ್ರಣಕ್ಕಾಗಿ ನಾಗರಿಕರು, ವಿದ್ಯಾರ್ಥಿಗಳು ಕೈಗೊಂಡಿರುವ ಕ್ರಮಗಳು, ಜಾಗೃತಿ ಕಾರ್ಯಕ್ರಮಗಳ ಬಗ್ಗೆ ಕಿರು ಚಿತ್ರಗಳನ್ನು ಮಾಡಿ, ಆ ವಿಡಿಯೊವನ್ನು ಸಾಮಾಜಿಕ ಜಾಲತಾಣ
ದಲ್ಲಿ ಅಪ್‌ಲೋಡ್‌ ಮಾಡಿ, ಬಿಬಿಎಂಪಿ ಖಾತೆಗೆ (@BBMPSplHealth) ಟ್ಯಾಗ್ ಮಾಡಬೇಕು. ಅದರ ಜೊತೆಗೆ https://bit.ly/3zFFNKg ಲಿಂಕ್ ಅಥವಾ ಕ್ಯೂಆರ್‌ ಕೋಡ್ ಸ್ಕ್ಯಾನ್ ಮಾಡುವ ಮೂಲಕ ವಿಡಿಯೊಗಳನ್ನು ಜುಲೈ 25ರೊಳಗೆ ಸ್ವವಿವರಗಳೊಂದಿಗೆ ಅಪ್‌ಲೋಡ್‌ ಮಾಡಬಹುದು’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ. ತಿಳಿಸಿದ್ದಾರೆ.

ADVERTISEMENT

ಲೈಕ್‌ ಆಧರಿಸಿ ಐದು ಅತ್ಯುತ್ತಮ ವಿಡಿಯೊ ಮಾಡಿದ ವಿದ್ಯಾರ್ಥಿಗಳಿಗೆ ‘ಡೆಂಗಿ ವಾರಿಯರ್’ ಎಂಬ ಬಿರುದು ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.