ಬೆಂಗಳೂರು: ಚಾಲುಕ್ಯ ವೃತ್ತದಲ್ಲಿ ಅನುಭವ ಮಂಟಪದ ಪರಿಕಲ್ಪನೆಯಲ್ಲಿ ಬಸವಣ್ಣನ ಪ್ರತಿಮೆ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ತಲುಪಿದ್ದು, ಮೇಯರ್ ಎಂ. ಗೌತಮ್‌ಕುಮಾರ್ ಅವರು ಶುಕ್ರವಾರ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಶ್ವಾರೂಢ ಬಸವಣ್ಣ ಪ್ರತಿಮೆ ಸುತ್ತಲು 12ನೇ ಶತಮಾನದ ವಚನ ಸಾಹಿತ್ಯ, ಪ್ರತಿಮೆ ಹಿಂಭಾಗದಲ್ಲಿ ಅರ್ಧ ಚಂದ್ರಾಕೃತಿಯ ಬೃಹತ್ ಗೋಡೆ ನಿರ್ಮಾಣ, ಅಲಂಕಾರಿಕ ವಿದ್ಯುತ್ ದೀಪಗಳು, ಶಿಲಾಸ್ಥಂಭಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಅತಿ ಶೀಘ್ರವೇ ಪ್ರತಿಮೆ ಉದ್ಘಾಟನೆ ದಿನಾಂಕ ನಿಗದಿ ಮಾಡಲಾಗುವುದು ಎಂದು ಮೇಯರ್ ತಿಳಿಸಿದರು.
ಕಮಾಂಡ್ ಕೇಂದ್ರ ಪರಿಶೀಲನೆ: ಪಶ್ಚಿಮ ವಲಯ ಮತ್ತು ಯಲಹಂಕ ವಲಯ ವ್ಯಾಪ್ತಿಯ ಕೋವಿಡ್ ಕಮಾಂಡ್ ಕೇಂದ್ರಗಳಿಗೂ ಮೇಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ‘ಸೋಂಕಿತರು ಹಾಗೂ ಅವರ ಸಂಪರ್ಕಿತರನ್ನು ಸಮರ್ಪಕವಾಗಿ ಗುರುತಿಸಬೇಕು. ತಪ್ಪಿಸಿಕೊಂಡವರ ಪಟ್ಟಿಯನ್ನು ಪೊಲೀಸರಿಗೆ ನೀಡಬೇಕು. ಆಂಬುಲೆನ್ಸ್ ಕೊರತೆ ಆಗದಂತೆ ಎಚ್ಚರ ವಹಿಸಬೇಕು’ ಎಂದು ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.