ADVERTISEMENT

ಬಿಬಿಎಂಪಿ ಪೌರಕಾರ್ಮಿಕರ ಕಾಯಂಗೆ ಆಗ್ರಹಿಸಿ ಡಿ. 5ರಂದು ಸಾಂಕೇತಿಕ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2023, 14:25 IST
Last Updated 4 ಡಿಸೆಂಬರ್ 2023, 14:25 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಬಿಬಿಎಂಪಿ ನೇರ ವೇತನ ಪೌರಕಾರ್ಮಿಕರು, ಮೇಲ್ವಿಚಾರಕರು ಹಾಗೂ ಗುತ್ತಿಗೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ಇದೇ 5ರಂದು ಬಿಬಿಎಂಪಿ ಕೇಂದ್ರ ಕಚೇರಿಯ ಮುಂಭಾಗದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲಾಗುವುದು ಎಂದು ಪೌರಕಾರ್ಮಿಕರ ಕ್ರಿಯಾ ಸಮಿತಿ ತಿಳಿಸಿದೆ.

ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಮಿತಿ ಉಪಾಧ್ಯಕ್ಷ ಎಂ.ಸುಬ್ಬರಾಯುಡು, ‘ ಬಿಬಿಎಂಪಿ ನೇರ ವೇತನ ಪೌರಕಾರ್ಮಿಕರು, ಲಾರಿ, ಆಟೊ ಚಾಲಕರು, ಸಹಾಯಕರು, ಲೋಡರ್ಸ್‌ ಹಾಗೂ ಕಸ ಸಂಗ್ರಹಗಾರರನ್ನು ಕೂಡಲೇ ಕಾಯಂ ಮಾಡಬೇಕೆಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಅಕ್ಟೋಬರ್‌ ತಿಂಗಳಲ್ಲಿ ನಡೆದ ಕಾರ್ಮಿಕರ ಜಾಗೃತಿ ಸಮಾವೇಶದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್ ಅವರು ನೇರ ವೇತನ ವ್ಯವಸ್ಥೆ ಪೌರಕಾರ್ಮಿಕರು ಹಾಗೂ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸುವ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಈ ಬಗ್ಗೆ ಮಾತನಾಡುತ್ತಿಲ್ಲ’ ಎಂದು ಹೇಳಿದರು.

ಕ್ರಿಯಾ ಸಮಿತಿಯ ನರಸಿಂಹ, ಜಿ. ಕೃಷ್ಣಯ್ಯ, ಕೆ.ಬಿ. ನರಸಿಂಹ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.