ADVERTISEMENT

ಬೆಂಗಳೂರು | ರಾಜಕಾಲುವೆ ಬಫರ್ ಝೋನ್‌ನಲ್ಲಿ ರಸ್ತೆ: ಪ್ರಕ್ರಿಯೆ ಆರಂಭ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2024, 23:30 IST
Last Updated 3 ಆಗಸ್ಟ್ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಥಣಿಸಂದ್ರದಿಂದ ಹೆಣ್ಣೂರು ಮುಖ್ಯ ರಸ್ತೆಯ ನಡುವಿರುವ ರಾಜಕಾಲುವೆಯ ಬಫರ್‌ ಝೋನ್‌ನಲ್ಲಿ ಸರ್ವೀಸ್‌ ರಸ್ತೆ ನಿರ್ಮಿಸಲು ಬಿಬಿಎಂಪಿ ಅಧಿಕೃತ ಪ್ರಕ್ರಿಯೆ ಆರಂಭಿಸಿದೆ.

ಹೆಬ್ಬಾಳ ರಕ್ಷಣಾ ಪ್ರದೇಶದಿಂದ (ಸರೋವರ ಲೇಔಟ್‌) ಥಣಿಸಂದ್ರ ಮುಖ್ಯ ರಸ್ತೆವರೆಗಿನ ರಾಜಕಾಲುವೆ ಬಫರ್‌ ಝೋನ್‌ನಲ್ಲಿ ಸರ್ವೀಸ್‌ ರಸ್ತೆ ನಿರ್ಮಾಣ, ಥಣಿಸಂದ್ರ ಮುಖ್ಯರಸ್ತೆಯಿಂದ ಹೆಣ್ಣೂರು ಮುಖ್ಯರಸ್ತೆವರೆಗಿನ ರಾಜಕಾಲುವೆಯ ರಕ್ಷಣೆ, ಮರು ಅಭಿವೃದ್ಧಿ ಹಾಗೂ ಸರ್ವೀಸ್‌ ರಸ್ತೆ ನಿರ್ಮಿಸಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಟೆಂಡರ್‌
ಆಹ್ವಾನಿಸಲಾಗಿದೆ.

ADVERTISEMENT

ಒಟ್ಟಾರೆ 7.75 ಕಿ.ಮೀ ಉದ್ದವಿರುವ ರಾಜಕಾಲುವೆ ಅಭಿವೃದ್ಧಿ, ಸರ್ವೀಸ್‌ ರಸ್ತೆ ನಿರ್ಮಾಣ ಸೇರಿದಂತೆ ಟಿಡಿಆರ್‌ ಸೇರಿದಂತೆ ಯೋಜನೆಯ ಒಟ್ಟು ವೆಚ್ಚವನ್ನು ಒಳಗೊಂಡ 3ಡಿ ಪರಿಕಲ್ಪನೆಯ ಡಿಪಿಆರ್‌ ವರದಿ ಸಲ್ಲಿಸಲು ಸೂಚಿಸಲಾಗಿದೆ. 

ಯಲಹಂಕ ವಲಯದ ಬೃಹತ್ ನೀರುಗಾಲುವೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಅವರು ಆಗಸ್ಟ್‌ 1ರಂದು ಟೆಂಡರ್‌ ಆಹ್ವಾನಿಸಿದ್ದಾರೆ. ಆಗಸ್ಟ್‌ 12ರವರೆಗೆ ಬಿಡ್‌ ಸಲ್ಲಿಸಲು ಅವಕಾಶವಿದ್ದು, ಆರು ತಿಂಗಳಲ್ಲಿ ಡಿಪಿಆರ್‌ ಪೂರ್ಣಗೊಳಿಸಬೇಕು ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.