ಬೆಂಗಳೂರು: ಬಿಬಿಎಂಪಿ 2019-20ನೇ ಸಾಲಿನ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣ ಏಪ್ರಿಲ್ ತಿಂಗಳೊಂದರಲ್ಲೇ ₹1 ಸಾವಿರ ಕೋಟಿ ದಾಟಿದೆ.ತಿಂಗಳೊಂದರಲ್ಲಿ ಸಂಗ್ರಹವಾದ ಗರಿಷ್ಠ ಮೊತ್ತ ಇದಾಗಿದೆ.
‘ಮಂಗಳವಾರ ರಾತ್ರಿ 10 ಗಂಟೆವರೆಗೆ ಒಟ್ಟು ₹925 ಕೋಟಿ ತೆರಿಗೆ ಸಂಗ್ರಹವಾಗಿದೆ. ಚಲನ್ ಮೂಲಕ ₹508 ಕೋಟಿ ಹಾಗೂ ಆನ್‌ಲೈನ್ ಮೂಲಕ ₹417 ಕೋಟಿ ಪಾವತಿ ಆಗಿದೆ’ ಎಂದು ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್ 'ಪ್ರಜಾವಾಣಿ'ಗೆ ತಿಳಿಸಿದರು.
‘ಇನ್ನೂ ಕೆಲವರು ತೆರಿಗೆ ಪಾವತಿಗೆ ಚಲನ್ ಪಡೆದಿದ್ದಾರೆ. ಅದರ ಮೊತ್ತ ಪಾಲಿಕೆ ಖಾತೆಗೆ ಇನ್ನಷ್ಟೇ ಸಂದಾಯ ಆಗ
ಬೇಕಿದೆ. ಈ ಮೊತ್ತ ಸುಮಾರು ₹195 ಕೋಟಿಗಳಷ್ಟಿದೆ. ಇದೂ ಸೇರಿದರೆ, ಏಪ್ರಿಲ್ ತಿಂಗಳಲ್ಲಿ ಸಂಗ್ರಹವಾದ ತೆರಿಗೆ ಮೊತ್ತ ₹1ಸಾವಿರ ಕೋಟಿ ದಾಟಲಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.