ADVERTISEMENT

ಟವರ್ ಶುಲ್ಕ: ಸಾಫ್ಟ್‌ವೇರ್‌ಗೆ ಕಾಯುತ್ತಿರುವ ಬಿಬಿಎಂಪಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 2:24 IST
Last Updated 15 ಜುಲೈ 2022, 2:24 IST
   

ಬೆಂಗಳೂರು: ಟೆಲಿಕಾಂ ಟವರ್‌ಗಳಿಗೆ(ಮೊಬೈಲ್ ಫೋನ್) ಅನುಮತಿ ನೀಡಿ ಶುಲ್ಕ ಪಡೆಯಲು ರಾಜ್ಯ ಸರ್ಕಾರ ನಿಯಮ ರೂಪಿಸಿದ್ದರೂ, ಸಾಫ್ಟ್‌ ವೇರ್ ಇಲ್ಲದೆ ಶುಲ್ಕ ವಸೂಲಿಯನ್ನೇ ಬಿಬಿಎಂಪಿ ಮಾಡಿಲ್ಲ.

2016ರಲ್ಲೇ ಕೇಂದ್ರ ಸರ್ಕಾರ ಇಂಡಿಯನ್ ಟೆಲಿಗ್ರಾಫ್ ರೈಟ್ ಆಫ್ ವೇ(ಆರ್‌ಒಡಬ್ಲ್ಯು) ನಿಯಮಗಳನ್ನು ಜಾರಿಗೆ ತಂದಿದೆ. ಇದರ ಪ್ರಕಾರ ನಿಯಮಗಳನ್ನು ರೂಪಿಸಲು ರಾಜ್ಯ ಸರ್ಕಾರ ಆರು ವರ್ಷಗಳ ಕಾಲಾವಕಾಶ ತೆಗೆದುಕೊಂಡಿದೆ. 2022ರ ಜನವರಿ ಯಲ್ಲಿ ನಿಯಮಗಳನ್ನು ರೂಪಿಸಿದೆ. ಆದರೆ, ಈವರೆಗೆ ಬಿಬಿಎಂಪಿ ಮೊಬೈಲ್ ಟವರ್‌ಗಳ ಅಳವಡಿಕೆಗೆ ಅನುಮತಿ ನೀಡುವ ಪ್ರಕ್ರಿಯೆಯನ್ನೇ ಆರಂಭಿಸಿಲ್ಲ.

ಆಸ್ತಿ ತೆರಿಗೆ, ಜಾಹೀರಾತು ತೆರಿಗೆ ಮತ್ತು ಮೊಬೈಲ್ ಟವರ್ ಶುಲ್ಕ ವಸೂಲಿಯಲ್ಲಿ ಪಾಲಿಕೆ ವಿಫಲವಾಗಿರುವ ಬಗ್ಗೆ ವಿಧಾನಸಭೆ ಅಂದಾಜುಗಳ ಸಮಿತಿ ಕೇಳಿರುವ ಪ್ರಶ್ನೆಗಳಿಗೆ ಪಾಲಿಕೆ ಮುಖ್ಯ ಆಯುಕ್ತರು ಉತ್ತರ ನೀಡಿದ್ದಾರೆ.

ADVERTISEMENT

‘ಮೊಬೈಲ್ ಟವರ್‌ ಅಳವಡಿಕೆಗೆ ಅನುಮತಿ ಪಡೆಯುವ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕವೇ ನಿರ್ವಹಿಸಲು ಸರ್ಕಾರ ತಿಳಿಸಿದೆ. ಅದಕ್ಕಾಗಿ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲು ಮಾಹಿತಿ ತಂತ್ರಜ್ಞಾನ ವಿಭಾಗಕ್ಕೆ ತಿಳಿಸ ಲಾಗಿದೆ. ಸಾಫ್ಟ್‌ವೇರ್ ಅಭಿವೃದ್ಧಿಯಾ ಗದ ಕಾರಣ ಅನುಮತಿ ನೀಡಿ ಶುಲ್ಕ ಸಂಗ್ರಹಿಸುವ ಪ್ರಕ್ರಿಯೆ ಆರಂಭಿ ಸಲು ಸಾಧ್ಯವಾಗಿಲ್ಲ’ ಎಂದಿದ್ದಾರೆ.

ಜಾಹೀರಾತು ತೆರಿಗೆ ಇಳಿಮುಖ: ಜಾಹೀರಾತು ಮೂಲಗಳಿಂದ ಪಾಲಿಕೆ ಸಂಗ್ರಹಿಸಿರುವ ತೆರಿಗೆ ಪ್ರಮಾಣ ವರ್ಷ ದಿಂದ ವರ್ಷಕ್ಕೆ ಇಳಿಮುಖ ಕಂಡಿದೆ. ಕಳೆದ ಆರು ವರ್ಷಗಳಲ್ಲಿ ಒಟ್ಟಾರೆ ₹39.06 ಕೋಟಿ ಸಂಗ್ರಹ ಮಾಡಿದೆ.

2017–18ನೇ ಸಾಲಿನಲ್ಲಿ ₹27.20 ಕೋಟಿ ಸಂಗ್ರಹವಾಗಿತ್ತು. ವರ್ಷದಿಂದ ವರ್ಷಕ್ಕೆ ಇಳಿಮುಖ ಕಂಡು 2021–22ನೇ ಸಾಲಿನಲ್ಲಿ ₹1.27 ಕೋಟಿಯಷ್ಟೇ ಸಂಗ್ರಹವಾಗಿದೆ. ಈ ಅಂಶವನ್ನೂ ಮುಖ್ಯ ಆಯುಕ್ತರು ಸಮಿತಿಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.