‘ಕೀಲ್ಸ್’ ಬ್ಯೂಟಿ ಪ್ರಾಡಕ್ಟ್ ನಗರದಲ್ಲಿ ಎರಡನೇ ಮಳಿಗೆ ತೆರೆದಿದೆ.‘ಬೆಂಗಳೂರಿಗರು ಸೌಂದರ್ಯ ಪ್ರಿಯರು. ಇಲ್ಲಿ ನಾವು ನೆಲೆಯೂರಲಿದ್ದೇವೆ’ ಎಂಬುದು ಸಂಸ್ಥೆಯ ಉಪಾಧ್ಯಕ್ಷೆ ಶಿಖಿ ಅಗರವಾಲ್ ಆತ್ಮವಿಶ್ವಾಸದ ಮಾತುಗಳು. ಒರಾಯನ್ ಮಾಲ್‌ನಲ್ಲಿ ಮಳಿಗೆ ಉದ್ಘಾಟನೆಗಾಗಿ ಬಂದಿದ್ದ ಅವರು ‘ಮೆಟ್ರೊ‘ ಜೊತೆ ಸೌಂದರ್ಯವರ್ಧಕ ಉತ್ಪನಗಳ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ.
ಬೆಂಗಳೂರಿಗರು ಕೀಲ್ಸ್ ಉತ್ಪನ್ನಗಳನ್ನು ಸ್ವೀಕರಿಸಿದ್ದಾರೆಯೇ?
ನಾವು ಮೊದಲಿಗೆ ವೈಟ್‌ಫೀಲ್ಡ್‌ನ ಫೀನಿಕ್ಸ್ ಮಾಲ್‌ನಲ್ಲಿ ಮಳಿಗೆ ಪ್ರಾರಂಭಿಸಿದಾಗ ಸ್ವಲ್ಪ ಆತಂಕ ಇತ್ತು. ಅಲ್ಲಿ ಸಿಕ್ಕ ಉತ್ತಮ ಪ್ರತಿಕ್ರಿಯೆ ನಾನು ಮರೆಯುವಂತೆಯೇ ಇಲ್ಲ. ಈಗ ಎರಡನೇ ಮಳಿಗೆ ಆರಂಭವಾಗುತ್ತಿದೆ ಎಂದರೆ ಅದಕ್ಕೆ ಜನರ ಪ್ರೀತಿಯೇ ಕಾರಣ.
ಉತ್ಪನ್ನಗಳ ವಿಶೇಷತೆ ಏನು?
ಸೌಂದರ್ಯ ಕಾಪಿಡುವುದೇ ಸೌಂದರ್ಯವರ್ಧಕ ಉತ್ಪನ್ನಗಳ ಮುಖ್ಯ ಉದ್ದೇಶ. ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದಲೇ ಅಮೆರಿಕದಲ್ಲಿ ಉತ್ಪನ್ನಗಳುತಯಾರಾಗುತ್ತಿದೆ. ಜರ್ಮನಿ, ಈಜಿಪ್ಟ್ ಸೇರಿದಂತೆ ಬೇರೆ ಬೇರೆ ದೇಶಗಳ ಹೂವುಗಳು ಇದಕ್ಕೆ ಬಳಕೆಯಾಗುತ್ತಿವೆ. 200ಕ್ಕೂ ಹೆಚ್ಚು ಪ್ರಾಡಕ್ಟ್‌ಗಳನ್ನು ಕಂಪನಿ ಹೊಂದಿದೆ. ಭಾರತದಲ್ಲಿ ಒಟ್ಟು 12 ಮಳಿಗೆಗಳಿವೆ. ವಿಶೇಷ ಎಂದರೆ ಮಹಿಳೆಯರ ಉತ್ಪನ್ನಗಳಿಗೆ ಕೊಟ್ಟಷ್ಟು ಪ್ರಾಮುಖ್ಯತೆಯನ್ನು ಪುರುಷ ಸೌಂದರ್ಯ ವರ್ಧಕಗಳಿಗೂ ನೀಡಿದ್ದೇವೆ.
ಸೌಂದರ್ಯವರ್ಧಕಗಳ ಮಾರುಕಟ್ಟೆಯಲ್ಲಿರುವ ಸವಾಲುಗಳೇನು?
ಹವಾಮಾನದ ಬದಲಾವಣೆಗಳಿಗೆ ತಕ್ಕಂತೆ ಹೊಸ ಉತ್ಪನ್ನಗಳನ್ನು ಪರಿಚಯಿಸಬೇಕು. ಎಲ್ಲಾ ದೇಶದ ಜನರ ಅಗತ್ಯಗಳು ಭಿನ್ನ. ಸ್ಪರ್ಧೆ ಹೆಚ್ಚಿದೆ. ಅದಕ್ಕೆ ತಕ್ಕಂತೆ ನಾವು ಸೃಜನಾತ್ಮಕತೆ ತೋರಬೇಕು. ಉತ್ಪನ್ನ ಚೆನ್ನಾಗಿದ್ದರೂ ಮಾರ್ಕೆಟಿಂಗ್ ಕಲೆ ಅನಿವಾರ್ಯವಾಗಿದೆ.
ಈ ಉತ್ಪನ್ನಗಳ ಅನಿವಾರ್ಯತೆ ಏನಿದೆ?
ಚರ್ಮದ ಕಾಳಜಿ ಮಾಡಬೇಕಾದರೆ ಕೆಲವು ಉತ್ಪನ್ನಗಳನ್ನು ಬಳಸಬೇಕಾಗುತ್ತದೆ. ಸೂರ್ಯನ ತಾಪಮಾನಕ್ಕೆ ಸನ್‌ಸ್ಕ್ರೀನ್ ಎಷ್ಟು ಮುಖ್ಯವೋ, ತುಟಿಯ ಅಂದಕ್ಕೆ ಲಿಪ್‌ಸ್ಟಿಕ್ ಅಷ್ಟೇ ಮುಖ್ಯ. ಯಾವುದನ್ನು ಬಳಸಬೇಕು ಎಂಬುದು ನಮ್ಮ ನಿರ್ಧಾರಕ್ಕೆ ಬಿಟ್ಟಿದ್ದು.
ಸೆಲೆಬ್ರಿಟಿ ಮೇಕಪ್‌ಗೆ ನಿಮ್ಮ ಬ್ರ್ಯಾಂಡ್ ಹೊಂದುತ್ತದೆಯೇ?
ಮಾಡೆಲ್‌ಗಳು ಹಾಗೂ ಸಿನಿಮಾ ನಟ, ನಟಿಯರು ನಮ್ಮ ಉತ್ಪನ್ನಗಳನ್ನು ಕೊಳ್ಳುತ್ತಿದ್ದಾರೆ. 150 ವರ್ಷಗಳಿಗಿಂತ ಹಳೆಯದಾದ ಬ್ರ್ಯಾಂಡ್ ಆಗಿರುವುದರಿಂದ ಅದೇ ನೈಸರ್ಗಿಕತೆಯನ್ನು ಉಳಿಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.