ಬೆಂಗಳೂರು: ಬಿ.ಇಡಿ ಪದವಿ ಪಡೆಯದೇ 2013ರಲ್ಲಿ ನೇಮಕಗೊಂಡಿದ್ದ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸೇವೋತ್ತರ ವ್ಯಾಸಂಗದ ಅವಧಿಯನ್ನು (ಬಿ.ಇಡಿ ಕೋರ್ಸ್‌ಗೆ ಹಾಕಿದ್ದ ರಜೆ) ಅಸಾಧಾರಣ ರಜೆ ಎಂದು ಪರಿಗಣಿಸಿ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಆದೇಶ ಹೊರಡಿಸಿದೆ.
ಬಿ.ಇಡಿ ವ್ಯಾಸಂಗ ಪೂರೈಸಲು ಉಪನ್ಯಾಸಕರು ಹಾಕಿದ್ದ ವೇತನ ರಹಿತ ರಜೆಯ ಅವಧಿಯನ್ನು ಅಸಾಧಾರಣ ರಜೆ ಎಂದು ಆದೇಶ ಮಾಡಿರುವುದಿಂದ ಅವರಿಗೆ 10 ವರ್ಷಗಳ ಕಾಲಮಿತಿ ಬಡ್ತಿ ಹಾಗೂ 15 ವರ್ಷಗಳ ಹಿರಿಯ ವೇತನ ಶ್ರೇಣಿ ಮಂಜೂರು ಮಾಡಲು ಅನುಮತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.