ಬೆಂಗಳೂರು: ನಗರದಲ್ಲಿ ಜೂನ್ 1ರಿಂದ 3,843 ಅನಧಿಕೃತ ಫ್ಲೆಕ್ಸ್/ಬ್ಯಾನರ್‌ಗಳನ್ನು ತೆರವು ಮಾಡಲಾಗಿದೆ. ಪೊಲೀಸ್ ಠಾಣೆಗೆ 76 ದೂರುಗಳನ್ನು ಬಿಬಿಎಂಪಿ ನೀಡಿದ್ದು, ಈ ಪೈಕಿ 48 ಎಫ್‌ಐಆರ್ ದಾಖಲಿಸಲಾಗಿದೆ.
ಅನಧಿಕೃತ ಫ್ಲೆಕ್ಸ್, ಬ್ಯಾನರ್ ಹಾಕಿದ್ದವರಿಗೆ ಒಟ್ಟು ₹75 ಸಾವಿರ ದಂಡ ವಿಧಿಸಲಾಗಿದೆ. ಆರ್.ಆರ್.ನಗರ ವಲಯದಲ್ಲಿ ₹50 ಸಾವಿರ, ಪಶ್ಚಿಮ ವಲಯದಲ್ಲಿ ₹25 ಸಾವಿರ ದಂಡ ವಿಧಿಸಲಾಗಿದೆ. ಮಹದೇವಪುರದಲ್ಲಿ ಅತಿಹೆಚ್ಚು (2399) ಫ್ಲೆಕ್ಸ್ ತೆರವುಗೊಳಿಸಲಾಗಿದೆ. ಪಶ್ಚಿಮ ವಲಯದಲ್ಲಿ 23 ದೂರುಗಳು ದಾಖಲಾಗಿವೆ ಎಂದು ಪ್ರಕಟಣೆ ತಿಳಿಸಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತುಗಳ ಕುರಿತು ಸಹಾಯವಾಣಿ 1533 ಅಥವಾ ಜಾಹೀರಾತು ವಿಭಾಗದ ವಾಟ್ಸ್ ಆ್ಯಪ್ 9480683939 ಸಂಖ್ಯೆಗೆ ಛಾಯಾಚಿತ್ರ ಅಥವಾ ವಿಡಿಯೊ ಕಳುಹಿಸಬಹುದು ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.