ADVERTISEMENT

ಬೆಂಗಳೂರು: ಎಪಿಎಸ್‌ ಬಳಿ ಕಸ ತೆರವಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 23:09 IST
Last Updated 25 ಅಕ್ಟೋಬರ್ 2024, 23:09 IST
ಆಚಾರ್ಯ ಪಾಠಶಾಲೆ ಪಕ್ಕದಲ್ಲಿಯೇ ನಿಂತಿರುವ ಕಸ ತುಂಬಿದ ಆಟೋಗಳು
ಆಚಾರ್ಯ ಪಾಠಶಾಲೆ ಪಕ್ಕದಲ್ಲಿಯೇ ನಿಂತಿರುವ ಕಸ ತುಂಬಿದ ಆಟೋಗಳು   

ಬೆಂಗಳೂರು: ನರಸಿಂಹರಾಜ ಕಾಲೊನಿಯಲ್ಲಿರುವ ಆಚಾರ್ಯ ಪಾಠಶಾಲಾ ಶಿಕ್ಷಣ ಸಂಸ್ಥೆಯ (ಎಪಿಎಸ್‌) ಪಕ್ಕದಲ್ಲಿಯೇ ಕಸ ತುಂಬಿರುವ ಲಾರಿಗಳು ಹಾಗೂ ಆಟೋಗಳು ನಿಲ್ಲುತ್ತಿದ್ದು, ಅವುಗಳ ತಂಗುದಾಣವಾಗಿದೆ. ಇವುಗಳನ್ನು ಸ್ಥಳಾಂತರಿಸಿ ವಿದ್ಯಾರ್ಥಿಗಳಿಗೆ ಸ್ವಚ್ಛ ಪರಿಸರ ಕಲ್ಪಿಸಬೇಕು ಎಂದು ಎಪಿಎಸ್‌ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ. ಎ. ಪ್ರಕಾಶ್‌ ಮನವಿ ಮಾಡಿದ್ದಾರೆ.

ಬಿಬಿಎಂಪಿಗೆ ಮನವಿ ಪತ್ರ ಬರೆದಿರುವ ಅವರು, ಲಾರಿ ಹಾಗೂ ಆಟೊಗಳನ್ನು ತೆರವುಗೊಳಿಸುವಂತೆ ಈ ಹಿಂದೆಯೂ ಮನವಿ ಸಲ್ಲಿಸಲಾಗಿತ್ತು. ಕಸದ ಸಮಸ್ಯೆಯ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಿಪರೀತ ಮಳೆಯ ಕಾರಣ ರಸ್ತೆಯಲ್ಲಿ ಓಡಾಡುವುದಕ್ಕೂ ತೊಂದರೆಯಾಗುತ್ತಿದೆ. ಶಾಲಾ ಮಕ್ಕಳಿಗೆ ಇದರಿಂದ ಅಲರ್ಜಿ, ದುರ್ವಾಸನೆಯಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾಗುತ್ತಿದೆ ಎಂದಿದ್ದಾರೆ.

ನೈರ್ಮಲ್ಯ ಮತ್ತು ಸ್ವಚ್ಛತೆಯ ದೃಷ್ಟಿಯಿಂದ ಶಾಲೆಯ ಸಮೀಪವಿರುವ ಕಸ ತುಂಬಿರುವ ಲಾರಿ ಮತ್ತು ಆಟೊಗಳನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ವಿನಂತಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.