ADVERTISEMENT

ಬೆಂಗಳೂರಿನಲ್ಲಿ 133 ವರ್ಷಗಳ ಬಳಿಕ ದಾಖಲೆ ಮಳೆ!

ಒಂದು ದಿನದ ಅವಧಿಯಲ್ಲಿ 11.1 ಸೆಂ.ಮೀ ಮಳೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2024, 13:53 IST
Last Updated 3 ಜೂನ್ 2024, 13:53 IST
<div class="paragraphs"><p>ಬೆಂಗಳೂರಿನ ಖೋಡೆ ರೈಲ್ವೆ ಅಂಡರ್ ಪಾಸ್ ಬಳಿ ಮಳೆ ನೀರು ನಿಂತಿದ್ದರಿಂದ ವಾಹನ ಸವಾರರು ಪರೆದಾಡುವಂತಾಯಿತು. –ಪ್ರಜಾವಾಣಿ ಚಿತ್ರ/ ಕಿಶೋರ್‌ ಕುಮಾರ್‌ ಬೋಳಾರ್</p></div>

ಬೆಂಗಳೂರಿನ ಖೋಡೆ ರೈಲ್ವೆ ಅಂಡರ್ ಪಾಸ್ ಬಳಿ ಮಳೆ ನೀರು ನಿಂತಿದ್ದರಿಂದ ವಾಹನ ಸವಾರರು ಪರೆದಾಡುವಂತಾಯಿತು. –ಪ್ರಜಾವಾಣಿ ಚಿತ್ರ/ ಕಿಶೋರ್‌ ಕುಮಾರ್‌ ಬೋಳಾರ್

   

ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ಜೂನ್‌ 2ರಂದು ಸಂಜೆ ನಿರಂತರವಾಗಿ ಸುರಿದ ಮಳೆ 133 ವರ್ಷಗಳ ಹಿಂದಿನ ದಾಖಲೆಯನ್ನು ಅಳಿಸಿ ಹಾಕಿತು.

ಭಾನುವಾರ ಸಂಜೆ ಹಾಗೂ ರಾತ್ರಿ ಸರಾಸರಿ 11.1 ಸೆಂ.ಮೀ ಮಳೆಯಾಗಿದೆ. ಇದು 133 ವರ್ಷಗಳ ಬಳಿಕ ಒಂದು ದಿನದ ಅವಧಿಯಲ್ಲಿ ನಗರದಲ್ಲಿ ಸುರಿದ ದಾಖಲೆ ಪ್ರಮಾಣ ಮಳೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಬೆಂಗಳೂರಿನ ಜಿ.ಕೆ.ವಿ.ಕೆ ಸುತ್ತಮುತ್ತ 6, ಎಚ್‌ಎಎಲ್‌ ಸುತ್ತಮುತ್ತ 5 ಸೆಂ.ಮೀ, ಬೆಂಗಳೂರು ನಗರ ವೀಕ್ಷಣಾಲಯದ ಸುತ್ತಮುತ್ತ 3, ಹೆಸರಘಟ್ಟದ ಸುತ್ತಮುತ್ತ 2 ಸೆಂ.ಮೀ ಮಳೆಯಾದ ವರದಿಯಾಗಿದೆ.

ನಗರದಲ್ಲಿ ಸುರಿದ ನಿರಂತರ ಮಳೆಯಿಂದ ಮತ್ತಷ್ಟು ತಂಪಾದ ವಾತಾವರಣ ನಿರ್ಮಾಣವಾಗಿದೆ. ಮುಂದಿನ ಎರಡು ದಿನಗಳು ಸಂಜೆ ಅಥವಾ ರಾತ್ರಿ ವೇಳೆ ಧಾರಾಕಾರ ಮಳೆಯಾಗಲಿದೆ. ನಗರದಲ್ಲಿ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್‌ ದಾಖಲಾಗುವ ಸಂಭವ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.