ADVERTISEMENT

ಬೆಂಗಳೂರು: 29ಕ್ಕೆ ಸ್ತನ ಕ್ಯಾನ್ಸರ್‌ ಜಾಗೃತಿ ಓಟ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2024, 16:12 IST
Last Updated 5 ಸೆಪ್ಟೆಂಬರ್ 2024, 16:12 IST
ಸುಧಾರೆಡ್ಡಿ ಅವರು ‘ಪಿಂಕ್‌ ಪವರ್‌ ರನ್‌’ ಪೋಷಾಕು ಅನಾವರಣ ಮಾಡಿದರು. ಪಿ.ವಿ. ಸಿಂಧು ಹಾಗೂ ಡಾ. ಸುಧಾ ಸಿನ್ಹ ಉಪಸ್ಥಿತರಿದ್ದರು.
ಸುಧಾರೆಡ್ಡಿ ಅವರು ‘ಪಿಂಕ್‌ ಪವರ್‌ ರನ್‌’ ಪೋಷಾಕು ಅನಾವರಣ ಮಾಡಿದರು. ಪಿ.ವಿ. ಸಿಂಧು ಹಾಗೂ ಡಾ. ಸುಧಾ ಸಿನ್ಹ ಉಪಸ್ಥಿತರಿದ್ದರು.   

ಬೆಂಗಳೂರು: ಸುಧಾರೆಡ್ಡಿ ಫೌಂಡೇಶನ್‌ ಮತ್ತು ಮೆಘಾ ಎಂಜಿನಿಯರಿಂಗ್‌ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್‌ (ಎಂಇಐಎಲ್‌) ಫೌಂಡೇಶನ್‌ ಜಂಟಿಯಾಗಿ ಇದೇ 29ರಂದು ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ‘ಪಿಂಕ್‌ ಪವರ್‌ ರನ್‌’ ಸ್ತನ ಕ್ಯಾನ್ಸರ್ ಜಾಗೃತಿ ಓಟ ಹಮ್ಮಿಕೊಂಡಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಧಾರೆಡ್ಡಿ ಫೌಂಡೇಶನ್‌ನ ಸಂಸ್ಥಾಪನಾಧ್ಯಕ್ಷೆ ಸುಧಾರೆಡ್ಡಿ, ‘ಈ ಓಟದಲ್ಲಿ ಗಿನ್ನಿಸ್‌ ವಿಶ್ವ ದಾಖಲೆ ನಿರ್ಮಿಸುವ ಗುರಿ ಹೊಂದಲಾಗಿದೆ. ‘ಪಿಂಕ್ ಪವರ್ ರನ್’ ಮೂರು ವಿಭಿನ್ನ ವಿಭಾಗಗಳಲ್ಲಿ ನಡೆಯಲಿದೆ. 3 ಕಿ.ಮೀ., 5 ಕಿ.ಮೀ. ಮತ್ತು 10 ಕಿ.ಮೀ. ಓಟದಲ್ಲಿ ವಿವಿಧ ವಯೋಮಾನದವರು ಭಾಗವಹಿಸಬಹುದಾಗಿದ್ದು, ಓಟದಲ್ಲಿ ಪಾಲ್ಗೊಳ್ಳುವವರಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ’ ಎಂದು ವಿವರಿಸಿದರು.

‘ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಸ್ತನ ಕ್ಯಾನ್ಸರ್ ಪೀಡಿತರಿಗೆ ಭರವಸೆ ನೀಡುವ ಪ್ರಯತ್ನ ಇದಾಗಿದೆ. ಈ ಓಟದಲ್ಲಿ ಪಾಲ್ಗೊಳ್ಳಲು www.pinkpowerrun.in ಮೂಲಕ ನೋಂದಾಯಿಸಿಕೊಳ್ಳಬಹುದು’ ಎಂದು ತಿಳಿಸಿದ್ದಾರೆ.

ADVERTISEMENT

ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಹಾಗೂ ಸ್ತ್ರೀರೋಗ ತಜ್ಞೆ ಡಾ. ಸುಧಾ ಸಿನ್ಹ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.