ADVERTISEMENT

ಬೆಂಗಳೂರು: ದರ್ಗಾ ಚಾವಣಿ ಕುಸಿತ: ಕಾರ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 5:39 IST
Last Updated 1 ಮಾರ್ಚ್ 2023, 5:39 IST
ದರ್ಗಾ ಕಟ್ಟಡದ ಚಾವಣಿ ಕುಸಿತ
ದರ್ಗಾ ಕಟ್ಟಡದ ಚಾವಣಿ ಕುಸಿತ   

ಬೆಂಗಳೂರು: ಅವೆನ್ಯೂ ರಸ್ತೆಯಲ್ಲಿರುವ ಹಜರತ್ ಮಹಮ್ಮದ್ ಶಾ ಖಾದ್ರಿ ದರ್ಗಾ ಕಟ್ಟಡದ ಚಾವಣಿ ಕುಸಿದು ಕಾರ್ಮಿಕ ಅಜರ್ ಉಲ್ ಹಕ್ (21) ಎಂಬುವವರು ಮಂಗಳವಾರ ಮೃತಪಟ್ಟಿದ್ದಾರೆ.

‘ಶಿಥಿಲಗೊಂಡಿದ್ದ ದರ್ಗಾದ ಹಳೇ ಕಟ್ಟಡ ತೆರವುಗೊಳಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕಾರ್ಮಿಕ ಶಾಕಿಬ್‌ವುದ್ದೀನ್ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಸಿಟಿ ಮಾರ್ಕೆಟ್ ಪೊಲೀಸರು ಹೇಳಿದರು.

‘ಪಶ್ಚಿಮ ಬಂಗಾಳದ ಅಜರ್ ಕೆಲಸ ಹುಡುಕಿಕೊಂಡು ಸ್ನೇಹಿತರ ಜೊತೆ ನಗರಕ್ಕೆ ಬಂದಿದ್ದರು. ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅವಘಡದಲ್ಲಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೇ ಅವರು ಮೃತಪಟ್ಟಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕರು: ‘ದರ್ಗಾ ಕಟ್ಟಡದ ತೆರವು ಕೆಲಸಕ್ಕೆ ಬಂದಿದ್ದ ಕಾರ್ಮಿಕರು, ಚಾವಣಿಯ ಒಂದೊಂದೇ ವಸ್ತುಗಳನ್ನು ತೆಗೆಯುತ್ತಿದ್ದರು. ಮಧ್ಯಾಹ್ನ 4.30ರ ಸುಮಾರಿಗೆ ಚಾವಣಿ ಏಕಾಏಕಿ ಕುಸಿದಿತ್ತು. ಅದರ ಜೊತೆ ಅಕ್ಕ–ಪಕ್ಕದ ಗೋಡೆಗಳೂ ಭಾಗಶಃ ಕುಸಿದಿದ್ದವು. ಅವಶೇಷಗಳಡಿ ಕಾರ್ಮಿಕರು ಸಿಲುಕಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

ಸಹಾಯಕ್ಕೆ ಹೋಗಿದ್ದ ಸ್ಥಳೀಯರು, ಕಾರ್ಮಿಕರನ್ನು ರಕ್ಷಿಸಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ಪೈಕಿ ಅಜರ್ ಮೃತಪಟ್ಟಿದ್ದಾರೆ. ಶಾಕೀಬ್‌ವುದ್ದೀನ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.