ADVERTISEMENT

ಬೆಂಗಳೂರಿನಲ್ಲಿ ದೀಪಾವಳಿ ಹಬ್ಬಕ್ಕೂ ಮುನ್ನ ಪಟಾಕಿ ಅವಘಡ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2022, 19:19 IST
Last Updated 23 ಅಕ್ಟೋಬರ್ 2022, 19:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದಲ್ಲಿ ದೀಪಾವಳಿ ಹಬ್ಬಕ್ಕೂ ಮುನ್ನವೇ ಪಟಾಕಿ ಅವಘಡಗಳು ಸಂಭವಿಸುತ್ತಿದ್ದು, ಮಿಂಟೊ ಕಣ್ಣಿನ ಆಸ್ಪ‍ತ್ರೆಯಲ್ಲಿ ಎರಡು ಪ್ರಕರಣಗಳು ವರದಿಯಾಗಿವೆ.

ಕಲಾಸಿಪಾಳ್ಯದ 35 ವರ್ಷದ ಸರೇಶ್ ಹಾಗೂ ಜೆ.ಪಿ. ನಗರದ 10 ವರ್ಷದ ಮನೋಜ್ ಪಟಾಕಿಯಿಂದಾಗಿ ಗಾಯಗೊಂಡಿದ್ದಾರೆ. ರಾಕೆಟ್ ಸ್ಫೋಟದಿಂದ ಬಾಲಕನ ಮುಖದ ಚರ್ಮ ಹಾಗೂ ಕಣ್ಣಿಗೆ ಹಾನಿಯಾಗಿದೆ.ಕಣ್ಣಿನ ರೆಪ್ಪೆ ಹಾಗೂ ತಲೆ ಕೂದಲುಗಳು ಸುಟ್ಟುಹೋಗಿವೆ. ಇದರಿಂದಾಗಿ ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟ ಗಾಯಗಳ ವಾರ್ಡ್‌ನಲ್ಲಿ ದಾಖಲಿಸಿ, ಚಿಕಿತ್ಸೆ ಒದಗಿಸಲಾಗುತ್ತಿದೆ. ಕಣ್ಣಿಗೆ ಗಂಭೀರ ಹಾನಿಯಾಗಿರುವುದರಿಂದ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯ ಬಗ್ಗೆ ವೈದ್ಯರು ಕಳವಳ
ವ್ಯಕ್ತಪಡಿಸಿದ್ದಾರೆ.

35 ವರ್ಷದ ವ್ಯಕ್ತಿ ಸರ ಪಟಾಕಿ ಸಿಡಿಸುವ ವೇಳೆಗೆ ಗಾಯಗೊಂಡಿದ್ದು, ಮಿಂಟೊ ಆಸ್ಪತ್ರೆಯಲ್ಲಿ ಹೊರ ರೋಗಿ ಯಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.