ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸದ ವಿಲೇವಾರಿ, ಸಂಸ್ಕರಣೆಯಲ್ಲಿ ನಿರೀಕ್ಷಿತ ಮಟ್ಟ ತಲುಪದಬಿಬಿಎಂಪಿ, ಇದೀಗ ತ್ಯಾಜ್ಯಸಾಗಾಟಕ್ಕೇ ಎರಡೂವರೆ ಪಟ್ಟಿಗೂ ಹೆಚ್ಚು ವೆಚ್ಚ ಮಾಡಲು ಹೊರಟಿದೆ. ಇದಕ್ಕಾಗಿ ₹267 ಕೋಟಿಯಷ್ಟು ಹೆಚ್ಚುವರಿ ವೆಚ್ಚಕ್ಕೆ ಮುಂದಾಗಿದೆ.
ತ್ಯಾಜ್ಯ ಸಂಗ್ರಹಣೆಗೆ ಮೂರು ಕಾಂಪ್ಯಾಕ್ಟರ್ ನಿಲ್ಲುವ 50 ‘ಸಣ್ಣ ವರ್ಗಾವಣೆ ಕೇಂದ್ರ’ಗಳನ್ನು ಮೂರು ವರ್ಷಗಳಿಂದಬಿಬಿಎಂಪಿಸ್ಥಾಪಿಸಲು ಸಾಧ್ಯವಾಗಿಲ್ಲ. ಹೀಗಿದ್ದರೂ, ಆರು ಕಾಂಪ್ಯಾಕ್ಟರ್, 45 ಕಂಟೈನರ್, 21 ಟ್ರಕ್, 21 ಹೂಕ್ ಲೋಡರ್‌ಗಳು ಕಾರ್ಯನಿರ್ವಹಿಸಿ, ಪ್ರತಿದಿನ ತಲಾ 150 ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹಿಸುವ ಮೂರು ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದೆ. 2022ರ ಜೂ.29ರಂದು ರಾಜ್ಯಸರ್ಕಾರಶೇ4ರಷ್ಟು ಅಧಿಕ ಟೆಂಡರ್ ಮೊತ್ತಕ್ಕೆ (₹267 ಕೋಟಿ) ಏಳು ವರ್ಷಗಳ ನಿರ್ವಹಣೆಗಾಗಿ ಅನುಮತಿ ನೀಡಿದೆ. ಮೂರು ಕೇಂದ್ರಗಳಿಗೆ ಜಾಗಗುರುತಿಸದಿದ್ದರೂಕಾರ್ಯಾದೇಶನೀಡಿ, ಕೋಟ್ಯಂತರ ರೂಪಾಯಿ ಹಣವನ್ನೂ ಬಿಡುಗಡೆ ಮಾಡಲಾಗಿದೆ.
30 ಮೀಟರ್ x 24 ಮೀಟರ್ ವಿಸ್ತೀರ್ಣದ ಕೇಂದ್ರ ಇದಾಗಿದ್ದು, ಸುಮಾರು 25 ವಾರ್ಡ್‌ಗಳಿಂದಕಸಸಂಗ್ರಹಿಸುವಆಟೊಗಳುಇಲ್ಲಿಗೆ ಬಂದುಕಸಸುರಿಯಬೇಕು. ಅದನ್ನು ಕಾಂಪ್ಯಾಕ್ಟರ್‌ಗಳಿಗೆ ತುಂಬಿಸಿ, ದ್ರವ ತ್ಯಾಜ್ಯ ಹರಿಯದಂತೆ ಸಾಗಣೆ ಮಾಡುವುದು ಉದ್ದೇಶ. ಆದರೆ, ನಗರ ವ್ಯಾಪ್ತಿಯಲ್ಲಿಇಷ್ಟು ವಾಹನಗಳು ಒಂದು ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವೇ ಎಂಬುದುಪ್ರಶ್ನೆ.
ಬಿಬಿಎಂಪಿವ್ಯಾಪ್ತಿಯಲ್ಲಿ ನಿತ್ಯ 4,200 ಮೆಟ್ರಿಕ್ ಟನ್ ಘನತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಇದರಲ್ಲಿಶೇ35ರಷ್ಟು ಮಾತ್ರಹಸಿಮತ್ತು ಒಣಕಸವಾಗಿವಿಂಗಡಿಸಲಾಗುತ್ತಿದೆ. ಮೂರು ಸಾವಿರ ಮೆಟ್ರಿಕ್ ಟನ್‌ಮಿಶ್ರತ್ಯಾಜ್ಯವನ್ನು ಭೂಭರ್ತಿಘಟಕಗಳಿಗೆ ವಿಲೇವಾರಿ ಮಾಡಲಾಗುತ್ತಿದೆ.ಕಸಸಾಗಣೆಗೆ ಪ್ರತಿ ಮೆಟ್ರಿಕ್ ಟನ್‌ಗೆ ಇದೀಗ ₹600 ವೆಚ್ಚ ಮಾಡಲಾಗುತ್ತಿದೆ. ಆದರೆ, ಮೂರು ವರ್ಗಾವಣೆ ಕೇಂದ್ರಗಳ ಸ್ಥಾಪನೆಯಿಂದ ಈ ವೆಚ್ಚ ಪ್ರತಿ ಮೆಟ್ರಿಕ್ ಟನ್‌ಗೆ ₹1,600ಕ್ಕೆ ತಲುಪುತ್ತದೆ. ಇದಕ್ಕೆ ಆಕ್ಷೇಪಣೆ ವ್ಯಕ್ತವಾಗಿ, ಲೋಕಾಯುಕ್ತದಲ್ಲಿಯೂದೂರು ದಾಖಲಾಗಿದೆ. ಇಷ್ಟಾದರೂ ‘ಶುಭ್ರ ಬೆಂಗಳೂರು’ಅನುದಾನದಡಿಬೆಂಗಳೂರುಘನತ್ಯಾಜ್ಯ ನಿರ್ವಹಣೆಕಂಪನಿ(ಬಿಎಸ್‌ಡಬ್ಲ್ಯುಎಂಎಲ್) ಹಣ ಬಿಡುಗಡೆ ಮಾಡುತ್ತಿದೆ.
ಸ್ಥಳವಿಲ್ಲ: ನಗರದ ಮಾರುಕಟ್ಟೆ ಪ್ರದೇಶ ಹಾಗೂ ವಾರ್ಡ್‌ಗಳಲ್ಲಿ ಲಭ್ಯವಿರುವ ಜಾಗದಲ್ಲಿ ವೈಜ್ಞಾನಿಕ ರೀತಿ ದ್ವಿತೀಯ ಹಂತದ ತ್ಯಾಜ್ಯ ಸಂಗ್ರಹಣೆಗೆ 50 ‘ಸಣ್ಣ ವರ್ಗಾವಣೆ ಕೇಂದ್ರ’ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಏಳು ವರ್ಷ ನಿರ್ವಹಣೆ ಮಾಡಲು 2019ರ ಮಾರ್ಚ್‌ನಲ್ಲಿ₹246 ಕೋಟಿ ವೆಚ್ಚಕ್ಕೆಕಾರ್ಯಾದೇಶನೀಡಲಾಗಿದೆ. ಆದರೆ, ಇದರಲ್ಲಿ ಈವರೆಗೆ ಸ್ಥಾಪನೆಯಾಗಿರುವುದು ಆರೇಳು ಮಾತ್ರ. ಪ್ರತಿ ಘಟಕದಲ್ಲಿ ಎರಡರಿಂದ ಮೂರು ಕಾಂಪ್ಯಾಕ್ಟರ್, ಒಂದು ಹೂಕ್ ಲೋಡರ್ ಯಂತ್ರ ಇರಬೇಕು ಎಂಬಷರತ್ತಿದೆ. ಇಂತಹ ಘಟಕಗಳ ಸ್ಥಾಪನೆಗೇ ಬಿಬಿಎಂಪಿವ್ಯಾಪ್ತಿಯಲ್ಲಿ ಸ್ಥಳವೇ ದೊರೆಯುತ್ತಿಲ್ಲ.
ಹೀಗಿದ್ದರೂ, ದೊಡ್ಡ ಪ್ರಮಾಣದಲ್ಲಿ ಮೂರು ವರ್ಗಾವಣೆ ಕೇಂದ್ರವನ್ನುಸ್ಥಾಪಿಸಲುಬಿಬಿಎಂಪಿಮುಂದಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ,ರಾಜ್ಯಮಟ್ಟದ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರದಿಂದ (ಎಸ್‌ಇಐಎಎ) ಈ ಕೇಂದ್ರಗಳ ಸ್ಥಾಪನೆಗೆ ಅನುಮತಿಯನ್ನೂ ಪಡೆದಿಲ್ಲ. ಅಲ್ಲದೆ, ಈ ಕೇಂದ್ರದ ಸುತ್ತ ಬಫರ್ ಝೋನ್ ಸ್ಥಾಪಿಸಬೇಕು. ಅಷ್ಟು ಪ್ರಮಾಣದ ಭೂಮಿಬಿಬಿಎಂಪಿವ್ಯಾಪ್ತಿಯಲ್ಲಿ ಸಿಗುತ್ತದೆಯೇಎಂಬ ಪ್ರಶ್ನೆ ಉದ್ಭವವಾಗಿದೆ.
ಕೇಂದ್ರಗಳೇ ಪ್ರಾರಂಭವಾಗಿಲ್ಲ...
‘ನಗರದಲ್ಲಿ ಸಣ್ಣ ಪ್ರಮಾಣದ ವರ್ಗಾವಣೆ ಕೇಂದ್ರಗಳೇ ಪ್ರಾರಂಭವಾಗಿಲ್ಲ. ಎಲ್ಲಿ ಜಾಗ ಸಿಗುವುದೋ ಅಲ್ಲಿ ಅವನ್ನು ಪ್ರಾರಂಭಿಸುತ್ತೇವೆ. ಇದೀಗ ಕೆಲವೇ ಕೆಲವು ಕಾರ್ಯನಿರ್ವಹಿಸುತ್ತಿವೆ’ ಎಂದು ಸಣ್ಣ ಪ್ರಮಾಣದ ವರ್ಗಾವಣೆ ಕೇಂದ್ರಗಳಮೇಲುಸ್ತುವಾರಿಯಾಗಿರುವಘನತ್ಯಾಜ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಭೀಮೇಶ್ ಪ್ರತಿಕ್ರಿಯಿಸಿದರು.
ಕಸ ಎಲ್ಲಿ ಹಾಕಬೇಕು?
‘ಕಸವನ್ನು ಮೂರು ವರ್ಗಾವಣೆ ಕೇಂದ್ರಗಳಿಗೆ ತಲುಪಿಸಿ, ಅಲ್ಲಿಂದ ಸಂಸ್ಕರಣೆ ಘಟಕಗಳಿಗೆ ಸಾಗಿಸಲಾಗುತ್ತದೆ.ಹೂಡಿಯಲ್ಲಿಕೇಂದ್ರದ ಕಾಮಗಾರಿ ಆರಂಭವಾಗಿದೆ.ಇನ್ನೆರಡಕ್ಕೆಜಾಗ ಹುಡುಕಲಾಗುತ್ತಿದೆ. ಎಲ್ಲರೂ ತಮ್ಮ ಭಾಗದಲ್ಲಿ ಕೇಂದ್ರ ಸ್ಥಾಪಿಸಬೇಡಿ ಎಂದರೆ ನಾವೇನು ಮಾಡುವುದು’ ಎಂದು ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತಡಾ. ಹರೀಶ್ ಕುಮಾರ್ ಪ್ರಶ್ನಿಸಿದರು.
ಹಣ ದುರ್ಬಳಕೆ: ರಮೇಶ್ ದೂರು
‘ಬಿಬಿಎಂಪಿ ಕಾಯ್ದೆ ಪ್ರಕಾರ ನಗರದಕಸನಿರ್ವಹಣೆ ಜವಾಬ್ದಾರಿಬಿಬಿಎಂಪಿಯದ್ದಾಗಿದೆ. ಆದರೆ,ಬೆಂಗಳೂರುಘನತ್ಯಾಜ್ಯ ನಿರ್ವಹಣೆಕಂಪನಿ(ಬಿಎಸ್‌ಡಬ್ಲ್ಯುಎಂಎಲ್) ಸ್ಥಾಪಿಸಿ ಹಣ ವೆಚ್ಚ ಮಾಡಲು ಯೋಜಿಸಲಾಗಿದೆ. ಇದಕ್ಕೆ ಸಂವಿಧಾನದ ಪ್ರಕಾರ ಯಾವುದೇ ಟೆಂಡರ್ ಕರೆಯಲು ಅಧಿಕಾರವಿಲ್ಲ. ಆದರೂ, ಕೋಟ್ಯಂತರ ರೂಪಾಯಿ ವೆಚ್ಚ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಅನುಷ್ಠಾನ ಸಾಧ್ಯವಿಲ್ಲದ ಯೋಜನೆಯಿಂದ ಹಣ ದುರುಪಯೋಗಲಿದೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿಯವರನ್ನೂ ಪ್ರಶ್ನಿಸಲಾಗಿದೆ. ಉತ್ತರ ಬಂದಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯಪಿ.ಆರ್. ರಮೇಶ್ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.