ಮುಂಬೈ: ನೀರು ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು (water-related services) ಆನ್‌ಲೈನ್ ಸಂಪರ್ಕಗಳ ಮೊರೆ ಹೋಗುವವರ ಸಂಖ್ಯೆ ಬೆಂಗಳೂರಿನಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಶುಕ್ರವಾರ Just Dial ಆನ್‌ಲೈನ್ ವೇದಿಕೆ, ಕಳೆದ ಅಕ್ಟೋಬರ್ 1ರಿಂದ ಮಾರ್ಚ್ 31ರವರೆಗಿನ ಅಂಕಿ–ಅಂಶಗಳನ್ನು ಬಿಡುಗಡೆ ಮಾಡಿದೆ.
ಬೆಂಗಳೂರಿನಲ್ಲಿ ನೀರು ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಆನ್‌ಲೈನ್‌ನಲ್ಲಿ ಸಹಾಯವಾಣಿಗಳನ್ನು ಸಂಪರ್ಕಿಸುವವರ ಸಂಖ್ಯೆ ಶೇ 101 ರಷ್ಟು ಹೆಚ್ಚಳವಾಗಿದೆ ಎಂದು ಅದು ಹೇಳಿದೆ.
ನೀರಿನ ಟ್ಯಾಂಕರ್‌ಗಳಿಗಾಗಿ, ಕುಡಿಯುವ ನೀರಿನ ಟ್ಯಾಂಕರ್‌ಗಳಿಗಾಗಿ ಹಾಗೂ ಅವುಗಳ ರಿಪೇರಿಗಳಿಗಾಗಿ, ವಾಟರ್ ಟ್ಯಾಂಕ್ ಸ್ವಚ್ಛತೆಗಾಗಿ, ನೀರು ಸಂಬಂಧಿತ ಮಿಷಿನ್, ಸಲಕರಣೆಗಳ ರಿಪೇರಿ/ಸುಧಾರಣೆಗಳಿಗಾಗಿ ಆನ್‌ನೈನ್ ಮೂಲಕ ಸಂಪರ್ಕಗಳ ಮೊರೆ ಹೋಗುವವರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ ಎಂದು ಹೇಳಿದೆ.
ಬೆಂಗಳೂರು ನಂತರ ಹೈದರಾಬಾದ್‌ನಲ್ಲಿ (ಶೇ 56 ರಷ್ಟು ಹೆಚ್ಚಳ) ಇದು ಹೆಚ್ಚು ಕಂಡು ಬಂದಿದೆ ಎಂದು ವರದಿ ಹೇಳಿದೆ.
ನಂತರದ ಸ್ಥಾನದಲ್ಲಿ ಪುಣೆ (ಶೇ 31), ಮುಂಬೈ (ಶೇ 11), ಅಹಮದಾಬಾದ್ (ಶೇ 7), ಚೆನ್ನೈ (ಶೇ 6), ದೆಹಲಿ (ಶೇ 3), ಹಾಗೂ ಕೋಲ್ಕತ್ತದಲ್ಲಿ (ಶೇ 3) ಕಂಡು ಬಂದಿವೆ.
ಮಳೆ ಕೊರತೆಯಿಂದ ಹಾಗೂ ತಾಪಮಾನದ ಹೆಚ್ಚಳದಿಂದ ಈ ಸಾರಿ ಬೆಂಗಳೂರು ಹಾಗೂ ಬೆಂಗಳೂರು ಸುತ್ತಮುತ್ತ ಕುಡಿಯುವ ಮತ್ತು ಬಳಸುವ ನೀರಿಗೆ ವ್ಯಾಪಕ ಹಾಹಾಕಾರ ಉಂಟಾಗಿದೆ. ಇದರಿಂದ ಜನರು ನೀರು ಸಂಬಂಧಿತ ಸಮಸ್ಯೆಗಳಿಗಾಗಿ ಆನ್‌ಲೈನ್‌ನಲ್ಲಿ ಸಂಪರ್ಕಗಳ/ಸಹಾಯವಾಣಿಗಳ ಮೊರೆ ಹೋಗುತ್ತಿರುವುದು ಹೆಚ್ಚುತ್ತಿದೆ.
Just Dial ಮುಂಬೈ ಮೂಲದ ಒಂದು ಇಂಟರ್‌ನೆಟ್ ಬಿಜಿನೆಸ್ ಕಂಪನಿಯಾಗಿದ್ದು, ಸ್ಥಳೀಯ ವ್ಯಾಪಾರ ವಹಿವಾಟು ಉತ್ತೇಜಿಸುವಲ್ಲಿ ತಂತ್ರಜ್ಞಾನ ಸೇವೆಗಳನ್ನು ಒದಗಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.