ADVERTISEMENT

Bengaluru Kambala | ಕರೆ ಪರೀಕ್ಷೆಯ ‘ಕುದಿ ಕಂಬಳ’ಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2023, 21:30 IST
Last Updated 23 ನವೆಂಬರ್ 2023, 21:30 IST
<div class="paragraphs"><p>‘ಬೆಂಗಳೂರು ಕಂಬಳ ನಮ್ಮ ಕಂಬಳ’ ಹೆಸರಿನಡಿ ನಡೆಯುವ ಕಂಬಳದ ಅಂಗವಾಗಿ ಕುದಿ ಕಂಬಳಕ್ಕೆ&nbsp; ಓಡಿಸಲು ಕೋಣಗಳಿಗೆ ಸ್ನಾನ ಮಾಡಿಸಲಾಯಿತು</p></div>

‘ಬೆಂಗಳೂರು ಕಂಬಳ ನಮ್ಮ ಕಂಬಳ’ ಹೆಸರಿನಡಿ ನಡೆಯುವ ಕಂಬಳದ ಅಂಗವಾಗಿ ಕುದಿ ಕಂಬಳಕ್ಕೆ  ಓಡಿಸಲು ಕೋಣಗಳಿಗೆ ಸ್ನಾನ ಮಾಡಿಸಲಾಯಿತು

   

–ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.

ಬೆಂಗಳೂರು: ಕಂಬಳಕ್ಕಿಂತ ಮೊದಲು ನಡೆಯುವ ಕುದಿ ಕಂಬಳಕ್ಕೆ ಗುರುವಾರ ಇಲ್ಲಿನ ಅರಮನೆ ಮೈದಾನದಲ್ಲಿ ನಿರ್ಮಿಸಲಾದ ‘ಕರೆ’ಯಲ್ಲಿ ಚಾಲನೆ ನೀಡಲಾಯಿತು.

ADVERTISEMENT

ಕರಾವಳಿಯಲ್ಲಿ ‘ಕಂಬಳ ಕರೆ’ ನಿರ್ಮಿಸಿ, ಪ್ರಾಯೋಗಿಕವಾಗಿ ಕೋಣಗಳನ್ನು ಓಡಿಸಲಾಗುತ್ತದೆ. ಕೋಣಗಳಿಗೆ ತಾಲೀಮು, ಕರೆಯ ಗುಣಮಟ್ಟದ ಪರೀಕ್ಷೆಗಳು ಈ ಮೂಲಕ ನಡೆಸಲಾಗುತ್ತದೆ. ಬಳಿಕ ಅಧಿಕೃತ ಕಂಬಳಕ್ಕೆ ಮುಹೂರ್ತ (ಕುದಿ) ನಿಗದಿ ಮಾಡಲಾಗುತ್ತದೆ. ಬೆಂಗಳೂರಿನಲ್ಲಿ ನ.25ರ ಬೆಳಿಗ್ಗೆಯಿಂದ ನಡೆಯಲಿರುವ ‘ಬೆಂಗಳೂರು ಕಂಬಳ ನಮ್ಮ ಕಂಬಳ’ಕ್ಕೆ ಪೂರ್ವಭಾವಿಯಾಗಿ ‘ಕುದಿ ಕಂಬಳ’ ನಡೆಸಲಾಯಿತು.

ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷರಾಗಿರುವ ಶಾಸಕ ಅಶೋಕ್ ರೈ ‘ಕುದಿ ಕಂಬಳ’ ಉದ್ಘಾಟಿಸಿದರು. ಮಹಿಳೆಯರು ಕರೆ ಪೂಜೆ ನೆರವೇರಿಸಿದರು. ತಿಂಗಳಾಡಿ ರೋಹಿತ್ ಬಂಗೇರ  ಅವರ ಎರಡು ಜೊತೆ ಕೋಣಗಳು, ಸುಳ್ಯದ ಕಾಂತಮಂಗಲದ ಒಂದು ಜೊತೆ ಕೋಣಗಳನ್ನುಕುದಿ ಕಂಬಳದಲ್ಲಿ ಪ್ರಾಯೋಗಿಕವಾಗಿ ಓಡಿಸಲಾಯಿತು. ಕೋಣಗಳು ಓಡುವ ‘ಕರೆ’ಯ ಪರಿಶೀಲನೆ ನಡೆಸಲಾಯಿತು. 

‘ಶನಿವಾರ ಬೆಳಿಗ್ಗೆೆ 10.30ಕ್ಕೆೆ ಕಂಬಳ ಆರಂಭವಾದರೂ ನೈಜ ಕಂಬಳ ಸಂಜೆ ರಂಗೇರಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಜೆ 5.30ಕ್ಕೆೆ ಬರಲಿದ್ದಾರೆ. ಕೋಣಗಳಿಗೆ ಹುರಿದುಂಬಿಸಲು ಬೆಂಗಳೂರು ಕಂಬಳದ ಪೂರ್ವಭಾವಿಯಾಗಿ ದಕ್ಷಿಣ ಕನ್ನಡದಿಂದ ಆಗಮಿಸಿದ ಮೂರು ಜೋಡಿ ಕೋಣಗಳು ಕುದಿ ಕಂಬಳದಲ್ಲಿ ಓಡಿಸಲಾಗಿದೆ’ ಎಂದು ಎಂದು ಅಶೋಕ್ ಕುಮಾರ್‌ ರೈ ತಿಳಿಸಿದರು.

‘ಕಂಬಳ ಕರೆಯ ಸಾಧಕ-ಬಾಧಕಗಳನ್ನು ಪರೀಕ್ಷಿಸಲು, ಮಣ್ಣು, ಮರಳು ಕಡಿಮೆಯಿದ್ದರೆ ಸರಿಪಡಿಸಲು ಕುದಿ ಕಂಬಳ ನಡೆಸಲಾಗುತ್ತದೆ. ಕರೆ ಸಮತಟ್ಟು ಇಲ್ಲದೇ ಇದ್ದರೆ ಕೋಣಗಳ ಕಾಲು ಹೂತು ಹೋಗುತ್ತದೆ. ಬೆಂಗಳೂರು ಕಂಬಳದ ಜೋಡು ಕರೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಎಲ್ಲವೂ ಸರಿಯಾಗಿದೆ’ ಎಂದು ಸಮಿತಿಯ ಕಾರ್ಯಾಧ್ಯಕ್ಷ ಮುರಳೀಧರ್ ರೈ ಮಠಂತಬೆಟ್ಟು ಮಾಹಿತಿ ನೀಡಿದರು.

‘ಬೆಂಗಳೂರು ಕಂಬಳ ನಮ್ಮ ಕಂಬಳ’ದ ಕರೆ –ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.