ಬೆಂಗಳೂರು: ನಗರದಲ್ಲಿ ರಾಜಕಾಲುವೆಗಳ ಜೊತೆಗೆ ಕೆರೆಗಳ ಒತ್ತುವರಿಯಲ್ಲಿ ಐಟಿ ಕಂಪನಿಗಳು, ಡೆವಲಪರ್‌ಗಳು, ಶಾಲೆ, ಕಾಲೇಜು, ಆಸ್ಪತ್ರೆಯವರು ಭಾಗಿಯಾಗಿದ್ದಾರೆ. ಖಾಸಗಿ ವ್ಯಕ್ತಿಗಳು ಸೇರಿ ಸರ್ಕಾರದ ಬಹುತೇಕ ಎಲ್ಲ ಇಲಾಖೆಗಳೂ ಕೆರೆ ಒತ್ತುವರಿ ಮಾಡಿಕೊಂಡಿವೆ.
ಬಾಗ್ಮನೆ ಟೆಕ್‌ಪಾರ್ಕ್, ಬಾಗ್ಮನೆ ಡೆವಲಪರ್ಸ್, ಐಶ್ವರ್ಯ ಅಪಾರ್ಟ್‌ಮೆಂಟ್, ರೈನ್‌ಬೊ ಬಿಲ್ಡಿಂಗ್ಸ್, ಕ್ಲಬ್ ಹೌಸ್,ಸೇಂಟ್ ಆನ್ನೇಸ್ ಕಾಲೇಜ್, ಕಾನ್‌ಕಾರ್ಡ್ ಸ್ಕೂಲ್, ವಿ.ಕೆ. ಟೆಕ್ ಪಾರ್ಕ್, ದಿವ್ಯಶ್ರೀ ಟೆಕ್ ಪಾರ್ಕ್,ಬಿಎನ್‌ಆರ್ ಮೆಮೊರಿಯಲ್ ಸ್ಕೂಲ್, ಬಿಜಿಎಸ್ ಆಸ್ಪತ್ರೆಗಳು ಕೆರೆಗಳನ್ನು ಒತ್ತುವರಿ ಮಾಡಿಕೊಂಡಿವೆ ಎಂದು ಬಿಬಿಎಂಪಿ ಸಿದ್ಧಪಡಿಸಿರುವ ಒತ್ತುವರಿ ಪಟ್ಟಿಯಲ್ಲಿ ದಾಖಲಾಗಿದೆ. ಈ ಪಟ್ಟಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
ಬಿಬಿಎಂಪಿ ದಾಖಲೆಯಲ್ಲಿರುವ 201 ಕೆರೆಗಳಲ್ಲಿ 851 ಎಕರೆಗೂ ಹೆಚ್ಚು ಒತ್ತುವರಿಯಾಗಿದೆ. ಇದರಲ್ಲಿ ಬಿಡಿಎ, ನೈಸ್, ಸ್ಲಂ ಬೋರ್ಡ್, ಸರ್ಕಾರಿ–ಬಿಬಿಎಂಪಿ ಶಾಲೆ, ಉದ್ಯಾನ, ಕೇಂದ್ರ ಕಾರಾಗೃಹ, ಸ್ಮಶಾನ, ಕೆಎಚ್‌ಬಿ ಕ್ವಾರ್ಟರ್ಸ್, ಮಿಲಿಟರಿ, ರೈಲ್ವೆ ಇಲಾಖೆ, ಕೆಐಎಡಿಬಿ, ಬಿಡಬ್ಲ್ಯುಎಸ್‌ಎಸ್‌ಬಿ, ಬಿಎಂಟಿಸಿ, ಪೊಲೀಸ್ ಠಾಣೆ, ತಹಶೀಲ್ದಾರ್ ಕಚೇರಿಗಳೂ ಸೇರಿವೆ. ಬೆಂಗಳೂರಿನಲ್ಲಿ 10 ವರ್ಷಗಳಿಂದೀಚೆಗೆ ಅಭಿವೃದ್ಧಿಗೊಂಡಿರುವ ಕೆರೆಗಳಲ್ಲೂ ಒತ್ತುವರಿ ಇದೆ. ಗೋವು ಆಶ್ರಮ, ಕೃಷಿ, ಸೈಕಲ್ ಶಾಪ್, ಪೆಟ್ರೋಲ್ ಬಂಕ್, ರಸ್ತೆ ಹೀಗೆ ಹಲವು ರೀತಿ ಹಾಗೂ ಖಾಸಗಿ ವ್ಯಕ್ತಿಗಳ ಹೆಸರಿನಲ್ಲೂ ಒತ್ತುವರಿಯ ಪ್ರಮಾಣವನ್ನು ಬಿಬಿಎಂಪಿ ದಾಖಲು ಮಾಡಿದೆ.
ಇನ್ನು ಬೆಂಗಳೂರು ಜಿಲ್ಲಾಡಳಿತದ ದಾಖಲೆಯಂತೆ ನಗರ ಜಿಲ್ಲೆಯಲ್ಲಿ 305 ಕೆರೆಗಳಲ್ಲಿ 2,366 ಎಕರೆ ಒತ್ತುವರಿ ಬಾಕಿ ಇದೆ.
ಪೂರ್ವ ವಲಯ
ಕಗ್ಗದಾಸಪು ರ ಕೆರೆ: ಬಾಗ್ಮನೆ ಡೆವಲಪರ್ಸ್ ಕಾಂಪೌಂಡ್– 3.89 ಗುಂಟೆ, ಬಾಗ್ಮನೆ ಡೆವಲಪರ್ಸ್ ಫೆನ್ಸಿಂಗ್– 3.72 ಗುಂಟೆ, ಗಾರ್ಡನ್ ವ್ಯೂ ಅಪಾರ್ಟ್‌ಮೆಂಟ್–0.9 ಗುಂಟೆ, ರಾಕ್ ಬಿಲ್ಡರ್ಸ್ ಅಪಾರ್ಟ್‌ಮೆಂಟ್– 1.05 ಗುಂಟೆ, ಐಶ್ವರ್ಯ ಅಪಾರ್ಟ್‌ಮೆಂಟ್– 9.46 ಗುಂಟೆ,.
ಬೈರಸಂದ್ರ ಕೆಳಗಿನ ಕೆರೆ: ಬಾಗ್ಮನೆ ಟೆಕ್‌ಪಾರ್ಕ್– 36 ಗುಂಟೆ, ಪೈನ್ ವುಡ್ ವಿಲ್ಲಾ– 1 ಗುಂಟೆ, ಗ್ರ್ಯಾಂಟ್ ಥೋರ್ಟನ್ ಪ್ರೈ. ಲಿ,– 13 ಗುಂಟೆ, ಕಾಗ್ನಿಜೆಂಟ್ ಟೆಕ್ನಾಲಜೀಸ್ ಪ್ರೈ. ಲಿ– 14 ಗುಂಟೆ, ಎಲ್‌ಆರ್‌ಡಿಇ– 19 ಗುಂಟೆ
ಕೋನೇನ ಅಗ್ರಹಾರ ಕೆರೆ: ಸರ್ ಎಂ. ವಿಶ್ವೇಶ್ವರಯ್ಯ ಕಾಲೇಜು– 3 ಎಕರೆ
ಮಹದೇವಪುರ ವಲಯ
ಅಂಬಲಿಪುರ ಮೇಲಿನ ಕೆರೆ: ಜನಜೀವನ್ ಸಿಲ್ವರ್ ಅಪಾರ್ಟ್‌ಮೆಂಟ್– 3.5 ಗುಂಟೆ
ಕಸವನಹಳ್ಳಿ ಕೆರೆ: ಕ್ಲಬ್ ಹೌಸ್ ಲೇಕ್ ವ್ಯೂ– 28 ಗುಂಟೆ
ಕೌದೇನಹಳ್ಳಿ ಕೆರೆ: ಸೇಂಟ್ ಆನ್ನೇಸ್ ಕಾಲೇಜ್– 10 ಎಕರೆ 25 ಗುಂಟೆ, ಬಿಎನ್‌ಆರ್ ಮೆಮೊರಿಯಲ್ ಸ್ಕೂಲ್– 26 ಗುಂಟೆ, ಐಟಿಐ ಲೇಔಟ್– 28 ಗುಂಟೆ
ಹರಳೂರು ಕೆರೆ: ಲೇಕ್ ಡ್ಯೂ ರೆಸಿಡೆನ್ಸಿ– 2 ಗುಂಟೆ
ಚಳ್ಳಕೆರೆ: ಕಾನ್‌ಕಾರ್ಡ್ ಸ್ಕೂಲ್–
2 ಎಕರೆ
ಕುಂದಲಹಳ್ಳಿ ಕೆರೆ: ವಿ.ಕೆ. ಟೆಕ್ ಪಾರ್ಕ್– 1 ಗುಂಟೆ, ದಿವ್ಯಶ್ರೀ ಟೆಕ್ ಪಾರ್ಕ್– 1.5 ಗುಂಟೆ
ವಿಭೂತಿಪುರ ಕೆರೆ: ಎಸ್‌ಎಲ್‌ಎನ್ ಪಬ್ಲಿಕ್ ಶಾಲೆ– .51 ಗುಂಟೆ, ಅಫಾನಾ ಸ್ಕೂಲ್– 14.10 ಗುಂಟೆ, ಸರೋಜಾ ಅಪಾರ್ಟ್‌ಮೆಂಟ್– 38.69 ಗುಂಟೆ, ಆರ್.ಆರ್. ಕ್ಯಾಸ್ಟ್ರಾಕ್ ಅಪಾರ್ಟ್‌ಮೆಂಟ್– 1.5 ಗುಂಟೆ, ಐಶ್ವರ್ಯ ಅಪಾರ್ಟ್‌ಮೆಂಟ್– 3.53 ಗುಂಟೆ.
ಭೋಗನಹಳ್ಳಿ ಕೆರೆ: ಆದರ್ಶ ಡೆವಲಪರ್ಸ್– 6.25 ಗುಂಟೆ
ಜುನ್ನಸಂದ್ರ ಕೆರೆ: ರೈನ್‌ಬೊ ಬಿಲ್ಡಿಂಗ್– 1.5 ಗುಂಟೆ, ಶಾಂತಿ ಡೆವಲಪರ್ಸ್– 6 ಗುಂಟೆ.
ಬೊಮ್ಮನಹಳ್ಳಿ ವಲಯ
ಯಲಚೇನಹಳ್ಳಿ ಕೆರೆ: ಆರ್.ಎಸ್. ರೆಸಿಡೆನ್ಸಿ– 6 ಗುಂಟೆ
ಕೂಡ್ಲು ದೊಡ್ಡಕೆರೆ: ಎಸ್‌ಜೆಆರ್ ಡೆವಲಪರ್ಸ್ ಅಪಾರ್ಟ್‌ಮೆಂಟ್– 22 ಗುಂಟೆ
ಸಾರಕ್ಕಿ ಕೆರೆ: ನಂದಿನಿ ಅಪಾರ್ಟ್‌ಮೆಂಟ್– 2.5 ಗುಂಟೆ
ಕೂಡ್ಲು ಚಿಕ್ಕಕೆರೆ: ಎನ್.ಡಿ. ಡೆವಲಪರ್ಸ್– 3 ಗುಂಟೆ; ಅಬ್ಬಾನ್ ಎಸೆನ್ಸ್ ಅಪಾರ್ಟ್‌ಮೆಂಟ್– 6 ಗುಂಟೆ
ಇಬ್ಲೂರು ಕೆರೆ: ಶೋಭಾ ನಿಂಬಸ್ ಅಪಾರ್ಟ್‌ಮೆಂಟ್– 0.25 ಗುಂಟೆ
ಯಲಚೇನಹಳ್ಳಿ ಕೆರೆ: ಹೇಮಕ್ಕ ಅಪಾರ್ಟ್‌ಮೆಂಟ್, ದಯಾನಂದ ಸ್ಕೂಲ್, ಓಂಶಕ್ತಿ ದೇವಸ್ಥಾನ–13 ಗುಂಟೆ
ದೊಡ್ಡಕಲ್ಲಸಂದ್ರ ಕೆರೆ: ಶ್ರೀ ಶಿವ ಆಂಜನೇಯ ಚಾರಿಟಬಲ್ ಟ್ರಸ್ಟ್– 19 ಗುಂಟೆ
ಕೋಣನಕುಂಟೆ ಕೆರೆ: ಖೋಡೇಸ್ ಡಿಸ್ಟಿಲರೀಸ್– 30 ಗುಂಟೆ, ಜೆಎಸ್‌ಎಸ್ ಹೈಸ್ಕೂಲ್– 1.25 ಗುಂಟೆ
ಅರೆಕೆರೆ ಕೆರೆ: ಮ್ಯಾಗ್ನೊಲಿಯಾ ಮಾರುತಿ ಪಬ್ಲಿಕ್ ಸ್ಕೂಲ್– 2 ಗುಂಟೆ, ಶಾಹಿ ಗಾರ್ಮೆಂಟ್ಸ್– 5 ಗುಂಟೆ.
ರಾಜರಾಜೇಶ್ವರಿನಗರ ವಲಯ
ಶ್ರೀಗಂಧಕಾವಲ್: ಅಂಬಾಭವಾನಿ ಸೇವಾ ಟ್ರಸ್ಟ್– .07 ಗುಂಟೆ
ಬೂಸೇಗೌಡನ ಕೆರೆ: ಬಿಜಿಎಸ್ ಆಸ್ಪತ್ರೆ– 8.5 ಗುಂಟೆ
ಯಲಹಂಕ ವಲಯ
ಅಲ್ಲಾಳಸಂದ್ರ ಕೆರೆ: ಜನಪ್ರಿಯ ಅಪಾರ್ಟ್‌ಮೆಂಟ್–.4 ಗುಂಟೆ
ನರಸಿಪುರ ಕೆರೆ: ಇಂಡಸ್ಟ್ರಿಯಲ್ ಎಂಪ್ಲಾಯೀಸ್ ಬಿಲ್ಡಿಂಗ್ ಕೊ–ಸೊಸೈಟಿ– 18 ಗುಂಟೆ.
ದಕ್ಷಿಣ ವಲಯ
ಕೆಂಪಾಂಬುಧಿ ಕೆರೆ: ಕಾಲಬೈರವೇಶ್ವರ ದೇವಸ್ಥಾನ– 2 ಎಕರೆ; ಗಂಗಮ್ಮ ದೇವಸ್ಥಾನ– 4.5 ಗುಂಟೆ
ದಾಸರಹಳ್ಳಿ ವಲಯ
ನೆಲಗೆದರೇನಹಳ್ಳಿ ಕೆರೆ: ಮಾಲ್ವಿನ್ ಹೆಲ್ತ್ ಸೆಂಟರ್– 17 ಗುಂಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.