ಬೆಂಗಳೂರು: ಸಾರಿಗೆ ನಿಗಮ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಚಾಲನೆ ದೊರಕಿದೆ. ಮೆಜೆಸ್ಟಿಕ್‌ನಲ್ಲಿ ದೂರದ ಊರುಗಳಿಗೆ ಹೋಗಲು ಬಸ್‌ಗಳು ಸಿದ್ಧವಾಗಿದೆ. ಆದರೆ, ಮಹಿಳೆಯರ ಸಂಖ್ಯೆ ಕಡಿಮೆ ಇದೆ.
ಮೆಜೆಸ್ಟಿಕ್ ಕೆಎಸ್ಆರ್‌ಟಿಸಿ ಕೇಂದ್ರ ಬಸ್ ನಿಲ್ದಾಣ ಹಾಗೂ ಬಿಎಂಟಿಸಿ ನಿಲ್ದಾಣದಲ್ಲಿ ಸಾಮಾನ್ಯ ದಿನಗಳ ರೀತಿಯಲ್ಲಿ ಪ್ರಯಾಣಿಕರಿದ್ದಾರೆ. ಭಾನುವಾರ ಆಗಿರುವುದರಿಂದ ಜನರ ಸಂಖ್ಯೆ ಕಡಿಮೆ ಎಂಬುದಾಗಿ ಸಿಬ್ಬಂದಿ ಹೇಳುತ್ತಿದ್ದಾರೆ.
ಪ್ರತಿ ಬಸ್‌ಗಳಲ್ಲಿ ಕೆಲ ಸೀಟ್‌ಗಳಲ್ಲಿ ಮಾತ್ರ ಮಹಿಳೆಯರು ಇದ್ದಾರೆ. ಅವರೆಲ್ಲರಿಗೂ ಉಚಿತ ಟಿಕೆಟ್ ನೀಡಲಾಗುತ್ತಿದೆ. ಎಲ್ಲರೂ ಖುಷಿಯಿಂದ ಪ್ರಯಾಣಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.